ಅತ್ಯಾಚಾರ
ಸಾಂದರ್ಭಿಕ ಚಿತ್ರ
ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈಚೆಗೆ ಬೆಳಗಾವಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ಮೇಲೆ ಇಬ್ಬರು ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ವಿದ್ಯಾರ್ಥಿನಿ ತಮ್ಮ ಸಹಪಾಠಿಗಳ ಜೊತೆ ಮೇ 18ರಂದು ರಾತ್ರಿ ಸಿನಿಮಾ ನೋಡಲು ತೆರಳಿದ್ದರು. ಸಿನಿಮಾ ಮುಗಿದ ಬಳಿಕ, ಸಹಪಾಠಿಯೊಬ್ಬನ ಮನೆಗೆ ಮೂವರೂ ಹೋಗಿದ್ದರು. ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪುವ ಮಾತ್ರೆ ಹಾಕಿ ವಿದ್ಯಾರ್ಥಿನಿಗೆ ಕುಡಿಸಿದ ಇಬ್ಬರೂ ಸಹಪಾಠಿಗಳು ಅತ್ಯಾಚಾರ ಎಸಗಿದರು.
ಪ್ರಜ್ಞೆ ಬಂದ ಬಳಿಕ ವಿದ್ಯಾರ್ಥಿನಿಯು ಬೆಳಗಾವಿಯಲ್ಲಿರುವ ತಮ್ಮ ಪಾಲಕರಿಗೆ ವಿಷಯ ತಿಳಿಸಿದರು. ಪಾಲಕರು ಸಾಂಗ್ಲಿಯ ವಿಶ್ರಮ್‌ಭಾಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.