ADVERTISEMENT

ತೋಟಪಟ್ಟಿ ಮನೆಗಳಿಗೂ ನಿರಂತರ ವಿದ್ಯುತ್‌: ಪೃಥ್ವಿ ಕತ್ತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 15:50 IST
Last Updated 22 ಸೆಪ್ಟೆಂಬರ್ 2022, 15:50 IST
ಹುಕ್ಕೇರಿಯಲ್ಲಿ ಗುರುವಾರ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 53ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಉಮೇಶ ಕತ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಹುಕ್ಕೇರಿಯಲ್ಲಿ ಗುರುವಾರ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 53ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಉಮೇಶ ಕತ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಹುಕ್ಕೇರಿ: ‘ಗ್ರಾಮಗಳಿಂದ ದೂರ ಇರುವ 10,825 ತೋಟಪಟ್ಟಿ ಮನೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ₹ 45.25 ಕೋಟಿ ವೆಚ್ಚದಲ್ಲಿ 16 ಕೆವಿಎ ಸಿಂಗಲ್‌ ಫೇಸ್ ಪರಿವರ್ತಕ ಅಳವಡಿಸಲಾಗುವುದು’ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಸಂಘದ 53ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ನಂತರ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

‘ಸಹಕಾರ ತತ್ವದಡಿ ನಡೆದಿರುವ ರಾಜ್ಯದ ಏಕೈಕ ವಿದ್ಯುತ್ ಸಂಸ್ಥೆ ಇದು. ಯಶಸ್ವಿಯಾಗಿ ಕಾರ್ಯನಿರ್ವಹಿಸಲು ರೈತರು ಹಾಗೂ ಗ್ರಾಹಕರ ಸಹಕಾರ ಕಾರಣ’ ಎಂದರು.

ADVERTISEMENT

ಸ್ವೀಕೃತಿ ಕೇಂದ್ರ ಸ್ಥಾಪನೆ: ‘ತಾಲ್ಲೂಕಿನಾದ್ಯಂತ ಇನ್ನಷ್ಟು ಸಮರ್ಪಕ ವಿದ್ಯುತ್ ಪೂರೈಸಲು ಸಂಘದ ಕಾರ್ಯಕ್ಷೇತ್ರದಲ್ಲಿ ‘400 ಕೆವಿ ವಿದ್ಯುತ್ ಸ್ವೀಕೃತಿ ಕೇಂದ್ರ’ ಸ್ಥಾಪಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದ ಪರಿಶೀಲನೆ ಮುಗಿದ ನಂತರ ಯೋಗ್ಯ ಸ್ಥಳದಲ್ಲಿ ಕೇಂದ್ರ ಸ್ಥಾಪಿಸಿ ಗುಣಮಟ್ಟದ ವಿದ್ಯುತ್ ಪೂರೈಸಲಾಗುವುದು’ ಎಂದರು.

‘ಬೆಳವಿ ಮತ್ತು ನಿಡಸೋಸಿ ಗ್ರಾಮಗಳಲ್ಲಿ 110 ಕೆವಿ ಹೊಸ ಸ್ಟೇಷನ್ ನಿರ್ಮಿಸಲು ಅನುಮತಿ ದೊರೆತಿದ್ದು, ಅವುಗಳಸ್ಥಾಪನೆಯ ನಂತರ ರೈತರಿಗೆ ಮತ್ತು ಜನರಿಗೆ ಇನ್ನೂ ಅನುಕೂಲ ಆಗುವುದು’ ಎಂದರು.

ವರದಿ ವಾಚಿಸಿದ ಸಂಘದ ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್.ಶ್ರೀನಿವಾಸ್‌, ‘ಸಂಘದಲ್ಲಿ 92,796 ಸದಸ್ಯರಿದ್ದು ₹ 9.46 ಕೋಟಿ ಷೇರು ಬಂಡವಾಳ ಸಂಗ್ರಹವಾಗಿದೆ’ ಎಂದರು.

ನಿರ್ದೇಶಕ ಅಶೋಕ ಚಂದಪ್ಪಗೋಳ ಮಾತನಾಡಿ, ‘ಗಂಗಾ ಕಲ್ಯಾಣ, ದೀನದಯಾಳ್‌ ಉಪಾಧ್ಯಾಯ ವಿದ್ಯುತ್ ಯೋಜನೆ ಹಾಗೂ ನಿರಂತರ ಜ್ಯೋತಿ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದರು.

2022–23ನೇ ಸಾಲಿನಲ್ಲಿ ರಚನಾ ಕಾರ್ಯಕ್ರಮ ಮತ್ತು ಅಂದಾಜು ಪತ್ರಿಕೆಯನ್ನು ಆರ್.ಇ. ನೇಮಿನಾಥ ಖೆಮಲಾಪುರೆ, ವ್ಯವಸ್ಥಾಪಕ ಡಿ.ಎಸ್.ನಾಯಿಕ, ಲೆಕ್ಕಾಧಿಕಾರಿ ಎಸ್.ಎಸ್.ಹಿರೇಮಠ, ಎಸ್.ಆರ್.ಮಲಗೌಡನವರ ಸಭೆಗೆ ತಿಳಿಸಿದರು.

ಇದಕ್ಕೂ ಮುನ್ನ ಉಮೇಶ ಕತ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ ಅವರು ಉಮೇಶ ಕತ್ತಿ ಅವರು ಸಂಘದ ಬೆಳವಣಿಗೆಗೆ ಮಾಡಿದ ಸೇವೆ ಸ್ಮರಿಸಿದರು. ಉಪಾಧ್ಯಕ್ಷ ವಿಷ್ಣು ರೇಡೆಕರ, ನಿರ್ದೇಶಕರಾದ ಶಶಿರಾಜ ಪಾಟೀಲ, ಕೆಂಚಪ್ಪ ಬೆನಚಿನಮರಡಿ, ರಮೇಶ ಕುಲಕರ್ಣಿ, ಬಸಗೌಡ ಮಗೆನ್ನವರ, ಕುಶಾಲ ಪಾಟೀಲ, ಸೋಮಲಿಂಗ ಪಟೋಳಿ, ರವೀಂದ್ರ ಅಸೂದೆ, ಈರಪ್ಪ ಬಂಜಿರಾಮ, ಸಂಗೀತಾ ದಪ್ಪಾದುಳಿ, ಶಿವಲೀಲಾ ಮಣಗುತ್ತಿ, ಸತ್ಯಪ್ಪ ನಾಯಿಕ ಇದ್ದರು.

ರೆಸಿಡೆಂಟ್ ಎಂಜಿನಿಯರ್ ನೇಮಿನಾಥ ಖೇಮಲಾಪೂರೆ ಮತ್ತು ವ್ಯವಸ್ಥಾಪಕ ಡಿ.ಎಸ್. ನಾಯಿಕ ನಿರೂಪಿಸಿದರು. ನಿರ್ದೇಶಕ ರವೀಂದ್ರ ಹಿಡಕಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.