ADVERTISEMENT

ಬೆಳಗಾವಿ: ಸದಸ್ಯತ್ವ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 13:49 IST
Last Updated 2 ಜುಲೈ 2021, 13:49 IST
ಗೋಕಾಕದಲ್ಲಿ ರಾಜ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಸತೀಶ ಜಾರಕಿಹೊಳಿ ಶುಕ್ರವಾರ ಚಾಲನೆ ನೀಡಿದರು
ಗೋಕಾಕದಲ್ಲಿ ರಾಜ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಸತೀಶ ಜಾರಕಿಹೊಳಿ ಶುಕ್ರವಾರ ಚಾಲನೆ ನೀಡಿದರು   

ಬೆಳಗಾವಿ: ರಾಜ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಸತೀಶ ಜಾರಕಿಹೊಳಿ ಗೋಕಾಕದಲ್ಲಿ ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವುದು ಉತ್ತಮ ಕ್ರಮವಾಗಿದೆ. ಕಲಾವಿದರು ದಶಕಗಳಿಂದ ತಮ್ಮ ಕಲೆಯಿಂದ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರವು ಪ್ಲಾಸ್ಟರ್‌ ಆಫ್‌ ಪ್ಯಾರಿಸ್ ಮೂರ್ತಿಗಳನ್ನು ನಿಷೇಧಿಸುವ ಮೂಲಕ ಈ ಕಲಾವಿದರಿಗೆ ಅನುಕೂಲ ಮಾಡಿಕೊಟ್ಟಿದೆ’ ಎಂದರು.

‘ಮಣ್ಣಿನ ಮೂರ್ತಿ ತಯಾರಕರಿಗೂ ಗುರುತಿನ ಚೀಟಿ, ವೃದ್ಧಾಪ್ಯ ವೇತನದಂತಹ ಸೌಲಭ್ಯಗಳು ಸಿಗುವಂತಾಗಬೇಕು’ ಎಂದು ಆಶಿಸಿದರು.

ADVERTISEMENT

ಸಂಘದ ರಾಜ್ಯ ಘಟಕದ ಮೋಹನ ಚವಾಣ, ಕಾರ್ಯದರ್ಶಿ ಮುತ್ತಣ್ಣ ಭರಡಿ, ಮಲ್ಲಿಕಾರ್ಜುನ ಅನಿಗೋಳ, ಶಂಕರ ಕಮ್ಮಾರ, ಬೀಮಪ್ಪ ಕಮ್ಮಾರ, ಕೊಣ್ಣೂರಿನ ಕಲಾವಿದರಾದ ಶಂಕರ ಕುಂಬಾರ, ಬಸವರಾಜ ಕುಂಬಾರ, ಗೋಪಾಲ ಕುಂಬಾರ, ಚನ್ನಬಸವ ತೀರಕಣ್ಣವರ, ಯಮನಪ್ಪ ಕುಂಬಾರ, ಸುರೇಶ ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.