ADVERTISEMENT

ಸ್ವಾಧಾರದಲ್ಲಿ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 14:04 IST
Last Updated 10 ಅಕ್ಟೋಬರ್ 2020, 14:04 IST
ಬೆಳಗಾವಿಯ ಶಾಹುನಗರದ ಸ್ವಾಧಾರ ಗೃಹದಲ್ಲಿ ಶನಿವಾರ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನ’ ಕಾರ್ಯಕ್ರಮದಲ್ಲಿ ಡಾ.ಯಾಸ್ಮಿನ್ ಡಿ.ಎನ್. ಮಾತನಾಡಿದರು
ಬೆಳಗಾವಿಯ ಶಾಹುನಗರದ ಸ್ವಾಧಾರ ಗೃಹದಲ್ಲಿ ಶನಿವಾರ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನ’ ಕಾರ್ಯಕ್ರಮದಲ್ಲಿ ಡಾ.ಯಾಸ್ಮಿನ್ ಡಿ.ಎನ್. ಮಾತನಾಡಿದರು   

ಬೆಳಗಾವಿ: ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಜೆಎನ್‌ಎಂಸಿಯ ಕೌನ್ಸೆಲಿಂಗ್ ಘಟಕ ಮತ್ತು ಮನೋವಿಜ್ಞಾನ ವಿಭಾಗದಿಂದ ಇಲ್ಲಿನ ಶಾಹು ನಗರದ ದುರ್ಗಾ ಮಾತಾ ಗಲ್ಲಿಯಲ್ಲಿರುವ ಶಾರದಾ ಮಾತಾ ಸ್ವಾಧಾರ ಗೃಹದಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನ’ದ ಅಂಗವಾಗಿ ಶನಿವಾರ ಮಾನಸಿಕ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಯಾಸ್ಮಿನ್ ಡಿ.ಎನ್. ಅವರು ಮಾನಸಿಕ ಒತ್ತಡ ನಿರ್ವಹಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ‘ವಿಭಾಗದಿಂದ ಪ್ರತಿ ದಿನ ಮಹಿಳೆಯರಿಗೆ ಧ್ಯಾನ ಹೇಳಿಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಅಲ್ಲಿನ ಮಹಿಳೆಯರಿಗೆ ಅಕಾಡೆಮಿಯಿಂದ ಮಾಸ್ಕ್‌ಗಳು, ಕ್ರೀಡಾ ಸಾಮಗ್ರಿಗಳು ಮತ್ತು ಕ್ರಾಫ್ಟ್‌ ಮಾಡುವ ಸಾಮಗ್ರಿಗಳನ್ನು ನೀಡಲಾಯಿತು.

ADVERTISEMENT

ವಿಭಾಗದ ಕ್ಯಾರಲ್ ಡಿಸೋಜಾ, ಸ್ವಾಧಾರ ಗೃಹದ ವಾರ್ಡನ್‌ ಶೈಲಜಾ, ಡಾ.ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.