ADVERTISEMENT

ಕುರಿಗಾಹಿಗಳ ಕುಟುಂಬಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನೆರವು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 13:12 IST
Last Updated 29 ಡಿಸೆಂಬರ್ 2020, 13:12 IST
ಬೆಳಗಾವಿಯಲ್ಲಿ ವಿಷಪೂರಿತ ಆಹಾರ ಸೇವಿಸಿ ಕುರಿಗಳು ಸಾವಿಗೀಡಾಗಿ ನಷ್ಟ ಅನುಭವಿಸಿದ ಕುರಿಗಾಹಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಮ್ಮ ಲಕ್ಷ್ಮಿ ತಾಯಿ ಪ್ರತಿಷ್ಠಾನದಿಂದ ಆರ್ಥಿಕ ನೆರವು ನೀಡಿದರು
ಬೆಳಗಾವಿಯಲ್ಲಿ ವಿಷಪೂರಿತ ಆಹಾರ ಸೇವಿಸಿ ಕುರಿಗಳು ಸಾವಿಗೀಡಾಗಿ ನಷ್ಟ ಅನುಭವಿಸಿದ ಕುರಿಗಾಹಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಮ್ಮ ಲಕ್ಷ್ಮಿ ತಾಯಿ ಪ್ರತಿಷ್ಠಾನದಿಂದ ಆರ್ಥಿಕ ನೆರವು ನೀಡಿದರು   

ಬೆಳಗಾವಿ: ವಿಷಪೂರಿತ ಆಹಾರ ಸೇವಿಸಿ ಕುರಿಗಳು ಸಾವಿಗೀಡಾಗಿ ನಷ್ಟ ಅನುಭವಿಸಿದ ಕುರಿಗಾಹಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ತಮ್ಮ ಲಕ್ಷ್ಮಿ ತಾಯಿ ಪ್ರತಿಷ್ಠಾನದಿಂದ ಆರ್ಥಿಕ ನೆರವು ನೀಡಿದರು.

ಸುಳಗಾದ ಪರುಶರಾಮ ಭೀಮಾ ಉಚಗಾಂವಕರ ಹಾಗೂ ಯಲ್ಲಪ್ಪ ರಾಮಾ ನರೋಟಿ ಅವರಿಗೆ ಸೇರಿದ 15 ಹದಿನೈದು ಕುರಿಗಳು ಆಕಸ್ಮಿಕವಾಗಿ ವಿಷಪೂರಿತ ಸಸ್ಯಗಳನ್ನು ತಿಂದು ಸಾವಿಗೀಡಾಗಿದ್ದವು. ಸುದ್ದಿ ತಿಳಿದ ತಕ್ಷಣ ಅವರ ಮನೆಗಳಿಗೆ ತೆರಳಿದ ಶಾಸಕಿ, ಧನ ಸಹಾಯ ಮಾಡಿ ಧೈರ್ಯವನ್ನು ತುಂಬಿದರು.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ADVERTISEMENT

ಮುಖಂಡರಾದ ಬಾಗಣ್ಣ ನರೋಟಿ, ಯುವರಾಜ ಕದಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.