ರಾಮದುರ್ಗ (ಬೆಳಗಾವಿ ಜಿಲ್ಲೆ): ತನ್ನೆರಡು ಮಕ್ಕಳನ್ನು ಬಾಂದಾರಕ್ಕೆ ತಳ್ಳಿದ ತಾಯಿ ತಾನೂ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಹಣಮಾಪುರ ಗ್ರಾಮದಲ್ಲಿ ನಡೆದಿದೆ.
ಹಣಮಾಪುರ ಗ್ರಾಮದ ಲಕ್ಷವ್ವ ಕಲ್ಲೋಳ್ಳೆಪ್ಪ ವಡ್ಡರ (35), ಕೀರ್ತಿ (10), ಶ್ರಾವಣಿ (3) ಮೃತರು. ಕಾರಣ ತಿಳಿದುಬಂದಿಲ್ಲ. ಗುರುವಾರ ಬೆಳಿಗ್ಗೆ ಸ್ಥಳೀಯರು ನೋಡಿದಾಗ ಘಟನೆ ಗೊತ್ತಾಗಿದೆ.
ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.