ADVERTISEMENT

ಮೂಡಲಗಿ: ಕಲ್ಮೇಶ್ವರಬೋಧ ಸ್ವಾಮಿ ಜಯಂತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 16:13 IST
Last Updated 28 ಜನವರಿ 2024, 16:13 IST
ಮೂಡಲಗಿಯಲ್ಲಿ ಕಲ್ಮೇಶ್ವರಬೋಧ ಸ್ವಾಮಿಗಳ 119ನೇ ಜಯಂತಿಯನ್ನು ಭಕ್ತರು ಭಾನುವಾರ ಆಚರಿಸಿದರು
ಮೂಡಲಗಿಯಲ್ಲಿ ಕಲ್ಮೇಶ್ವರಬೋಧ ಸ್ವಾಮಿಗಳ 119ನೇ ಜಯಂತಿಯನ್ನು ಭಕ್ತರು ಭಾನುವಾರ ಆಚರಿಸಿದರು   

ಮೂಡಲಗಿ: ಮೂಡಲಗಿಯ ಶಿವಬೋಧರಂಗ ಮಠದ ಪವಾಡ ಪುರುಷ, ವಾಕ್ಸಿದ್ಧಿಪುರುಷ ಕಲ್ಮೇಶ್ವರಬೋಧ ಸ್ವಾಮಿಗಳ 119ನೇ ಜಯಂತಿಯನ್ನು ಭಾನುವಾರ ಕಲ್ಮೇಶ್ವರ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸಂಭ್ರಮದಿಂದ ಆಚರಿಸಿದರು.

ಕಲ್ಮೇಶ್ವರಬೋಧ ಸ್ವಾಮಿಗಳ ಅಶ್ವಾರೂಢ ಮೂರ್ತಿಗೆ ಶ್ರೀರಂಗ ಜೋಶಿ ಮತ್ತು ಪಂಚಯ್ಯ ಹಿರೇಮಠ ಅವರು ಪೂಜೆ ನೆರವೇರಿಸಿದರು. ಕಲ್ಮೇಶ್ವರ ವೃತ್ತವನ್ನು ತಳಿರು ತೋರಣಗಳಿಂದ ವಿಶೇಷವಾಗಿ ಸಿಂಗಾರಗೊಳಿಸಿದ್ದರು. ಕಲ್ಮೇಶ್ವರಬೋಧ ಸ್ವಾಮೀಜಿಯವರಿಗೆ ಸೇರಿದ ಅಪಾರ ಭಕ್ತವೃಂದವು ಒಕ್ಕೊರಲಿನಿಂದ ಜಯಘೋಷಗಳನ್ನು ಹಾಕಿದರು.

ಪುರಸಭೆ ಸದಸ್ಯರು, ಮುಖಂಡರು, ಕಲ್ಮೇಶ್ವರಬೋಧ ಮೂರ್ತಿ ಪ್ರತಿಷ್ಠಾನ ಸಮಿತಿಯ ಅಣ್ಣಪ್ಪ ಅಕ್ಕನವರ, ಮನೋಹರ ಸಣ್ಣಕ್ಕಿ, ಹನಮಂತ ಸತರಡ್ಡಿ, ಸದಾಶಿವ ನಿಡಗುಂದಿ, ಮಹಾದೇವ ಶೆಕ್ಕಿ, ಶಿವಬಸು ಸುಣಧೋಳಿ, ಶ್ರೀಕಾಂತ ಪತ್ತಾರ, ಚೇತನ ನಿಶಾನಿಮಠ, ಪ್ರಕಾಶ ಮಾಲಗಾರ, ಅಜ್ಜಪ್ಪ ಅಂಗಡಿ, ಕುಮಾರ ಗಿರಡ್ಡಿ, ಜಗದೀಶ ತೇಲಿ, ಆನಂದ ಬಳಿಗಾರ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.