ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆ
ಮೂಡಲಗಿ: ತಾಲ್ಲೂಕಿನ ಅವರಾದಿ ಸೇತುವೆಯಿಂದ ಘಟಪ್ರಭಾ ನದಿಗೆ ಟ್ರ್ಯಾಕ್ಟರ್ ಮಗುಚಿ ಬಿದ್ದಿದ್ದರಿಂದ ನೀರಲ್ಲಿ
ಕೊಚ್ಚಿಹೋಗಿದ್ದ ವ್ಯಕ್ತಿಗಾಗಿ ಸೋಮವಾರ
ವೂ ಶೋಧಕಾರ್ಯ ನಡೆಯಿತು. ಆದರೆ, ಪ್ರಯೋಜನ ಆಗಲಿಲ್ಲ.
‘ಸತತ ಮಳೆಯಿಂದ ಮುಳುಗಡೆ ಆಗಿದ್ದ ಸೇತುವೆ ಮೇಲೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆದರೂ ಭಾನುವಾರ ಬೆಳಿಗ್ಗೆ ಸೇತುವೆ ದಾಟುವಾಗ, ಟ್ರ್ಯಾಕ್ಟರ್ ಮಗುಚಿ ಬಿತ್ತು. 10 ಪೈಕಿ 9 ಮಂದಿ ಈಜಿ ದಡ ಸೇರಿದರು. ಆದರೆ, ಇನ್ನೊಬ್ಬ ಮಾತ್ರ ಪತ್ತೆಯಾಗಲಿಲ್ಲ. ಮಂಗಳವಾರವೂ ಶೋಧ ಕಾರ್ಯ ಮುಂದುವರೆಸುತ್ತೇವೆ’ ಎಂದು ಮೂಡಲಗಿಯ ಪ್ರಭಾರ ತಹಶೀಲ್ದಾರ್ ಮೋಹನ ಭಸ್ಮೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.