ADVERTISEMENT

ಮೂಡಲಗಿ | ಜಾತ್ರೆಗೆ ಶಿವಬೋಧರಂಗ ಮಠ ಸಜ್ಜು

ಮೇ 6ರಿಂದ 9ರ ವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ

ಬಾಲಶೇಖರ ಬಂದಿ
Published 4 ಮೇ 2025, 4:41 IST
Last Updated 4 ಮೇ 2025, 4:41 IST
ಮೂಡಲಗಿಯ ಶಿವಬೋಧರಂಗರ ಮೂಲ ಸನ್ನಿಧಿ
ಮೂಡಲಗಿಯ ಶಿವಬೋಧರಂಗರ ಮೂಲ ಸನ್ನಿಧಿ   

ಮೂಡಲಗಿ: ಮೇ 6ರಿಂದ 9ರವರೆಗೆ ಜರುಗಲಿರುವ ಮೂಲ ಪೀಠಾಧಿಪತಿಗಳಾದ ಶಿವಬೋಧರಂಗರ ಪುಣ್ಯತಿಥಿ ಹಾಗೂ ಜಾತ್ರೆಗೆ ಇಲ್ಲಿನ ಶಿವಬೋಧರಂಗ ಮಠ ಸಜ್ಜಾಗಿದೆ. ಈಗಿನ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಾಲ್ಕು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.

ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಧರ್ಮದವರು ಈ ಮಠಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಈ ಭಾಗದಲ್ಲಿ ‘ಭಾವೈಕ್ಯ ಮಠ’ ಎಂದೂ ಖ್ಯಾತಿ ಗಳಿಸಿದೆ.

ವಿವಿಧ ಕಾರ್ಯಕ್ರಮ: ಮೇ 6ರಂದು ರಾತ್ರಿ ಸಹಸ್ರಾರು ಭಕ್ತರು ಧೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸುವರು. 7ರಂದು ಬೆಳಿಗ್ಗೆ 11ಕ್ಕೆ ಶಿವಬೋಧರಂಗರ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಕರ್ನಾಟಕ, ಮಹಾರಾಷ್ಟ್ರದ ಅಪಾರ ಸಂಖ್ಯೆಯ ಭಕ್ತರು ಸೇರುವರು. ಸಂಜೆ 4ಕ್ಕೆ ಗುರುಮಂಡಲ ಪೂಜೆ, 5ಕ್ಕೆ ಮಹಾಪ್ರಸಾದ ವಿತರಣೆ, ರಾತ್ರಿ 10ಕ್ಕೆ ಪಲ್ಲಕ್ಕಿ ಸೇವೆ ನಡೆಯಲಿದೆ.

ADVERTISEMENT

8ರಂದು ಬೆಳಿಗ್ಗೆ ವಿಷ್ಣುಸಹಸ್ರನಾಮ ಪಠಣ, ಮಹಾಪ್ರಸಾದ ವಿತರಣೆ, ಸಂಜೆ 4ರಿಂದ ರಾತ್ರಿ 10ರವರೆಗೆ ಸಂಗೀತ ಗೋಷ್ಠಿ, 10ಕ್ಕೆ ಪಲ್ಲಕ್ಕಿ ಸೇವೆ ನೆರವೇರಲಿದೆ. 9ರಂದು ಬೆಳಿಗ್ಗೆ ಭಕ್ತರು ಸಕ್ಕರೆ ಹರಕೆ ತೀರಿಸಲಿದ್ದು, ಸಂಜೆ 4ರಿಂದ ರಾತ್ರಿ 10ರವರೆಗೆ ಸಂಗೀತ ಗೋಷ್ಠಿ, 10ರಂದು ನಸುಕಿನ ಜಾವ 5.30ಕ್ಕೆ ಮೂಲ ಸನ್ನಿಧಿ ಸ್ಥಳಕ್ಕೆ ವಾದ್ಯಗಳೊಂದಿಗೆ ಪಲ್ಲಕ್ಕಿಯ ಆಗಮನವಾಗಿ, ಉಭಯ ಶ್ರೀಗಳಿಂದ ಸಿಹಿ ವಿತರಣೆ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

ಮಠದ ಹಿನ್ನೆಲೆ: 15ನೇ ಶತಮಾನದಲ್ಲಿ ಮಹಾರಾಷ್ಟ್ರದ ಠಾಕಳಿ ಗ್ರಾಮದಲ್ಲಿ ಆಶ್ರಯಿಸಿದ ತಪಸ್ವಿ ಸಹಜಬೋಧ ಸ್ವಾಮೀಜಿ ಆಜ್ಞೆಯಂತೆ, ಅವರ ಶಿಷ್ಯ ಶ್ರೀರಂಗಬೋಧ ಸ್ವಾಮೀಜಿ ದಕ್ಷಿಣ ನಿಶ್ವಿತ ದಿಕ್ಕಿನಲ್ಲಿ ಪ್ರಯಾಣ ಮಾಡಿ ನೆಲೆಸಿದ ಸ್ಥಳವೇ ಈಗಿನ ಮೂಡಲಗಿ. ಶ್ರೀರಂಗಬೋಧರು ಬರುವಾಗ ತಮ್ಮೊಂದಿಗೆ ಸಹಜಬೋಧ ಸ್ವಾಮೀಜಿ ಪಾದುಕೆಗಳನ್ನು ಹೊತ್ತು ತಂದಿದ್ದು, ಅವು ಮೂಡಲಗಿಯ ಶ್ರೀಮಠದಲ್ಲಿ ಇಂದಿಗೂ ಪೂಜಿಸಲ್ಪಡುತ್ತವೆ.

7ರಂದು ಶಿವಬೋಧರಂಗರ ಪಲ್ಲಕ್ಕಿ ಉತ್ಸವ ಸಿಹಿ ವಿತರಣೆ ಮೂಲಕ ಜಾತ್ರೆ ಸಂಪನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.