ADVERTISEMENT

ನಿಪ್ಪಾಣಿ | ಕೃಷಿ ಉತ್ಸವ: ರೈತರಾದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 2:54 IST
Last Updated 10 ಡಿಸೆಂಬರ್ 2025, 2:54 IST
ನಿಪ್ಪಾಣಿಯ ವಿಎಸ್‌ಎಂನ ಜಿ.ಐ. ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಕೃಷಿ ಉತ್ಸವದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ವಿದ್ಯಾರ್ಥಿಗಳಿಂದ ತರಕಾರಿಗಳನ್ನು ಕೊಂಡುಕೊಂಡರು
ನಿಪ್ಪಾಣಿಯ ವಿಎಸ್‌ಎಂನ ಜಿ.ಐ. ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಕೃಷಿ ಉತ್ಸವದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ವಿದ್ಯಾರ್ಥಿಗಳಿಂದ ತರಕಾರಿಗಳನ್ನು ಕೊಂಡುಕೊಂಡರು   

ನಿಪ್ಪಾಣಿ: ‘ಎಲ್ಲರೂ ಒಂದೊಂದು ಕ್ಷೇತ್ರದಲ್ಲಿ ಪಾರಂಗತರಾಗಿರುತ್ತಾರೆ. ಆದರೆ ನಮ್ಮ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲೂ ಪರಿಣತರಾಗಬೇಕು ಎಂಬುದು ನಮ್ಮ ಆಸೆ’ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಚೇರಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.

ವಿಎಸ್‌ಎಂನ ಜಿ.ಐ. ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಜರುಗಿದ ಕೃಷಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯವರೆಗೆ ಸಾಗಿಸುವವರೆಗೆ ರೈತರ ನೋವು, ಕಷ್ಟ-ಸುಖಗಳನ್ನು ತಿಳಿದುಕೊಳ್ಳುವುದು, ಕೃಷಿ ಕುರಿತು ಆಸಕ್ತಿ ಬೆಳೆಸುವುದು, ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಬ್ರ್ಯಾಂಡಿಂಗ್‌ನೊಂದಿಗೆ ಕೃಷಿ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕೆಂಬುದೇ ಇಂದಿನ ಕೃಷಿ ಉತ್ಸವದ ಉದ್ದೇಶ. ನಮ್ಮ ವಿದ್ಯಾರ್ಥಿಗಳು ಶಿಕ್ಷಕರಿಂದ ಇವೆಲ್ಲ ವಿಷಯಗಳನ್ನು ತಿಳಿದುಕೊಂಡರು’ ಎಂದರು.

ADVERTISEMENT

ಗಣ್ಯರು ಎತ್ತಿನಗಾಡಿಯಲ್ಲಿ ಬಂದು ಗಮನ ಸೆಳೆದರು. ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಹಾಗೂ ನಿರ್ದೇಶಕ ಆನಂದ ಗಿಂಡೆ ಕೊಡಲಿಯಿಂದ ಹುಲ್ಲು ಕತ್ತರಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಗಣ್ಯರು ವಿದ್ಯಾರ್ಥಿಗಳಿಂದ ತರಕಾರಿಗಳನ್ನು ಕೊಂಡುಕೊಂಡರು.

ವೈಸ್- ಚೇರ್ಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ನಿರ್ದೇಶಕ ಹರಿಶ್ಚಂದ್ರ ಶಾಂಡಗೆ, ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಸಚಿನ ಹಾಲಪ್ಪನವರ, ಪ್ರವೀನ ಪಾಟೀಲ, ಅವಿನಾಶ ಪಾಟೀಲ, ಶೇಖರ ಪಾಟೀಲ, ಗಣೇಶ ಖಡೇದ, ರುದ್ರಕುಮಾರ ಕೋಠಿವಾಲೆ, ಸಂಜಯ ಶಿಂತ್ರೆ ಇದ್ದರು.

ವಿಎಸ್‌ಎಂದ ಜಿ.ಐ. ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ (ಪ್ರೌಢಶಾಲಾ ವಿಭಾಗ)ದಲ್ಲಿ ಆಯೋಜಿಸಿದ ಕೃಷಿ ಉತ್ಸವವನ್ನು ಚೇರಮನ್ ಚಂದ್ರಕಾಂತ ಕೋಠಿವಾಲೆ ಮತ್ತು ನಿರ್ದೇಶಕ ಆನಂದ ಗಿಂಡೆ ಉದ್ಘಾಟಿಸಿದರು. ಪಪ್ಪು ಪಾಟೀಲ ಸಮೀರ ಬಾಗೇವಾಡಿ ಹರಿಶ್ಚಂದ್ರ ಶಾಂಡಗೆ ಮತ್ತಿತರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.