ADVERTISEMENT

‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ’ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 6:03 IST
Last Updated 1 ಜನವರಿ 2021, 6:03 IST
ಪ್ರತ್ಯೇಕ ಧ್ವಜಾರೋಹಣ
ಪ್ರತ್ಯೇಕ ಧ್ವಜಾರೋಹಣ    

ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯವರು ಶುಕ್ರವಾರ ಬೆಳಿಗ್ಗೆ ಪ್ರತ್ಯೇಕ ಧ್ವಜಾರೋಹಣ ನೆರವೇರಿಸಿದರು.

ಆ ಗ್ರಾಮದ ಬೈಲಹೊಂಗಲ ಬಸ್ ನಿಲ್ದಾಣ ಸಮೀಪದ ಭಡಕಲ್ ಬಿದಿಯ ಮುಖ್ಯ ರಸ್ತೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಡಿವೇಶ ಇಟಗಿ ಹಾಗೂ ಕಾರ್ಯದರ್ಶಿ ಶ್ರೀಕಾಂತ ಮಾಧುಭರಮಣ್ಣವರ ನೇತೃತ್ವದಲ್ಲಿ ರಾಷ್ಟ್ರಗೀತೆಯೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು.

ತಕ್ಷಣ ಬಂದ ಪೊಲೀಸರು, ಆ ಧ್ವಜ ತೆರವುಗೊಳಿಸಿ ಹೋರಾಟಗಾರರನ್ನು ತಮ್ಮ ವಶಕ್ಕೆ ಪಡೆದರು.

ADVERTISEMENT

ಈ ವೇಳೆ ಮಾತನಾಡಿದ ಅಡಿವೇಶ ಇಟಗಿ, ‘ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಹೀಗಾಗಿ, ಪ್ರತ್ಯೇಕ ರಾಜ್ಯ ಆಗುವವರೆಗೂ ನಮ್ಮ ಹೋರಾಟ ನಿಲ್ಲದು. ಈ ಧ್ವಜಾರೋಹಣ 3ನೇ ಬಾರಿಗೆ ಮಾಡುತ್ತದ್ದೇವೆ. ನಾವು ಕನ್ನಡ ವಿರೋಧಿಗಳಲ್ಲ. ಆದರೆ, ನಮಗೆ ಅಭಿವೃದ್ಧಿ ಬೇಕಿದೆ. ಆದರೆ, ಸರ್ಕಾರ ಒಬ್ಬರಿಗೆ ಬೆಣ್ಣೆ; ಮತ್ತೊಬ್ಬರಿಗೆ ಸುಣ್ಣ ಹಂಚುತ್ತಾ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯದರ್ಶಿ ಶ್ರೀಕಾಂತ ಮಾಧುಭರಮಣ್ಣವರ ಮಾತನಾಡಿ, ‘ಸುವರ್ಣ ವಿಧಾನಸೌಧ ಸಂಪೂರ್ಣ ನಿರುಪಯುಕ್ತವಾಗಿದೆ’ ಎಂದರು.

ಆನಂದಗೌಡ ಪಾಟೀಲ, ಬಸವರಾಜ ಧೂಳಪ್ಪನವರ, ಗಂಗಾಧರ ಅಗಸಿಮನಿ, ಸಮರ್ಥ ಇಟಗಿ, ವಿರೂಪಾಕ್ಷ ರೊಟ್ಟಿ, ಚಂಬಣ್ಣ ವಾಲಿ, ಸಂತೋಷ ಕಾಗತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.