ADVERTISEMENT

ಬೆಳಗಾವಿ: ದೂರವಾಣಿ ಸಂಖ್ಯೆ ಆಧಾರ್‌ಗೆ ಜೋಡಣೆ; ಅಂಚೆಯಣ್ಣನಿಂದ ನೆರವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 15:11 IST
Last Updated 23 ಜುಲೈ 2021, 15:11 IST

ಬೆಳಗಾವಿ: ದೂರವಾಣಿ ಸಂಖ್ಯೆಯನ್ನು ಆಧಾರ್‌ ಕಾರ್ಡ್‌ಗೆ ಜೋಡಿಸುವ ಕಾರ್ಯವನ್ನು ಪೋಸ್ಟ್‌ಮನ್‌ಗಳ ಮೂಲಕ ಮಾಡಿಸುವ ಕಾರ್ಯಕ್ಕೆ ಅಂಚೆ ಇಲಾಖೆಯಿಂದ ಚಾಲನೆ ನೀಡಲಾಗಿದೆ.

‘ಈವರೆಗೆ ಜನರು ಈ ಕಾರ್ಯಕ್ಕಾಗಿ ಅಧಾರ್‌ ನೋಂದಣಿ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಈಗ ಸಾರ್ವಜನಿಕರ ಮನೆ ಬಾಗಿಲಲ್ಲೇ ಮೊಬೈಲ್‌ ಫೋನ್‌ನಲ್ಲಿರುವ ತಂತ್ರಾಂಶವನ್ನು ಬಳಸಿ ಜೋಡಿಸಲಾಗುತ್ತದೆ’ ಎಂದು ಇಲ್ಲಿನ ಕೇಂದ್ರ ಅಂಚೆ ಕಚೇರಿಯ ಸೂಪರಿಂಟೆಂಡೆಂಟ್ ಎಚ್‌.ಬಿ. ಹಸಬಿ ತಿಳಿಸಿದ್ದಾರೆ.

‘ಜಿಲ್ಲೆಯ 500 ಪೋಸ್ಟ್‌ಮನ್‌ಗಳು ಈ ಕೆಲಸದಲ್ಲಿ ನಿರ್ವಹಿಸುತ್ತಾರೆ. ಗ್ರಾಹಕರು ₹ 50 ಶುಲ್ಕ ಪಾವತಿಸಬೇಕಾಗುತ್ತದೆ. ಐಪಿಪಿಬಿ (ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್) ಹಾಗೂ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಒಪ್ಪಂದದ ಪ್ರಕಾರ ಆಧಾರ್ ಕಾರ್ಡ್ ಹಾಗೂ ದೂರವಾಣಿ ಸಂಖ್ಯೆ ಜೋಡಿಸುವ ಜವಾಬ್ದಾರಿಯನ್ನು ಕೊಡಲಾಗಿದೆ. ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.