ADVERTISEMENT

ಸವದತ್ತಿ: ನರೇಗಾದ ‘ಸ್ತ್ರೀ ಚೇತನ’ ಅಭಿಯಾನಕ್ಕೆ ಚಾಲನೆ 

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 1:41 IST
Last Updated 25 ಸೆಪ್ಟೆಂಬರ್ 2025, 1:41 IST
ಚುಳಕಿ ಗ್ರಾಮದಲ್ಲಿ ಸ್ತ್ರೀ ಚೇತನ ಅಭಿಯಾನವನ್ನು ಉದ್ಘಾಟಿಸಲಾಯಿತು
ಚುಳಕಿ ಗ್ರಾಮದಲ್ಲಿ ಸ್ತ್ರೀ ಚೇತನ ಅಭಿಯಾನವನ್ನು ಉದ್ಘಾಟಿಸಲಾಯಿತು   

ಸವದತ್ತಿ: ನರೇಗಾದಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ 50ಕ್ಕಿಂತ ಕಡಿಮೆ ಇರುವ 24 ಗ್ರಾಮ ಪಂಚಾಯತಿಗಳಲ್ಲಿ ಸ್ತ್ರೀ ಚೇತನ ಅಭಿಯಾನ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನರೇಗಾ ಎಡಿ ಆರ್.ಬಿ. ರಕ್ಕಸಗಿ ಹೇಳಿದರು.

ತಾಲ್ಲೂಕಿನ ಚುಳಕಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ಜರುಗಿದ  ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲ್ಲೂಕಿನ ಉಗರಗೋಳ, ಹಿರೇಕುಂಬಿ, ಅಕ್ಕಿಸಾಗರ, ಹೊಸೂರ, ಮಬನೂರ, ಕಗದಾಳ, ಕರೀಕಟ್ಟಿ, ಶಿರಸಂಗಿ, ಮುಗಳಿಹಾಳ ಸೇರಿ 24 ಗ್ರಾಮಗಳಲ್ಲಿ ಈ ಅಭಿಯಾನ ನಡೆಯಲಿದೆ.

ADVERTISEMENT

₹ 349 ಇದ್ದ ಕೂಲಿ ಮೊತ್ತವನ್ನು ಈಗ ₹ 370ಕ್ಕೇರಿಸಿ ಅನುಕೂಲ ಕಲ್ಪಿಸಿದೆ. ಇದರಿಂದ ದುಡಿಯುವ ಕೈಗಳಿಗೆ ನಿರಂತರ ಕೆಲಸದ ಜೊತೆಗೆ ಆರ್ಥಿಕತೆ ಸದೃಢಗೊಳ್ಳಲಿದೆ. ಗ್ರಾಮಗಳಲ್ಲಿನ ಸ್ವ-ಸಹಾಯ ಸಂಘಗಳಿಗೆ ಹಾಗೂ ಪ್ರತಿ ಮನೆಗೆ ಭೇಟಿ ನೀಡಿ ಈ ಕುರಿತು ಅರಿವು ಮೂಡಿಸುವ ಕಾರ್ಯ ನಡೆದಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿ ಆರ್ಥಿಕ ಸ್ವಾವಲಂಬಿಗಳಾಗಲಿದ್ದಾರೆಂದು ತಿಳಿಸಿದರು.

ಬಳಿಕ ಮನರೇಗಾ ಕರಪತ್ರಗಳ್ನು ವಿತರಿಸಲಾಯಿತು. ಈ ವೇಳೆ ಅಧ್ಯಕ್ಷೆ ಯಲ್ಲವ್ವ ಉಪ್ಪಾರ, ಪಿಡಿಒ ಆನಂದ ಸುತಗಟ್ಟಿ, ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಂತ್ರಿಕ ಸಹಾಯಕ ವಿಜಯ ಪೇಟೆ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.