ADVERTISEMENT

ಬೆಳಗಾವಿ | ಕುಸಿದ ಹಳೆ ಮನೆ: 12 ಮಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 15:59 IST
Last Updated 15 ಆಗಸ್ಟ್ 2020, 15:59 IST
ಬೆಳಗಾವಿಯ ಗೊಂದಳಿ ಗಲ್ಲಿಯಲ್ಲಿ ಶನಿವಾರ ರಾತ್ರಿ ಕುಸಿದಿದ್ದ ಮನೆಯ ಗೋಡೆ ತೆರವುಗೊಳಿಸುವ ಕಾರ್ಯಾಚರಣೆ ನಡೆದ ದೃಶ್ಯ
ಬೆಳಗಾವಿಯ ಗೊಂದಳಿ ಗಲ್ಲಿಯಲ್ಲಿ ಶನಿವಾರ ರಾತ್ರಿ ಕುಸಿದಿದ್ದ ಮನೆಯ ಗೋಡೆ ತೆರವುಗೊಳಿಸುವ ಕಾರ್ಯಾಚರಣೆ ನಡೆದ ದೃಶ್ಯ   

ಬೆಳಗಾವಿ: ಇಲ್ಲಿನ ಗೊಂದಳಿ ಗಲ್ಲಿಯಲ್ಲಿ ಶನಿವಾರ ರಾತ್ರಿ ಹಳೆ ಮನೆಯೊಂದು ಪಕ್ಕದ ಮನೆಯ ಮೇಲೆ ದಿಢೀರ್‌ ಕುಸಿದು ಬಿದ್ದಿದ್ದರಿಂದ, ಒಳಗೆ ಸಿಲುಕಿದ್ದ ಬಾಲಕ ಮತ್ತು ಬಾಲಕಿ ಸೇರಿದಂತೆ 12 ಮಂದಿಯನ್ನು ರಕ್ಷಿಸಲಾಗಿದೆ.

ಘಟನೆಯಿಂದಾಗಿ ಸುತ್ತಮುತ್ತಲಿನ ಮನೆಗಳವರು ಆತಂಕಗೊಂಡಿದ್ದರು.

ಡಾ.ಕೋಟೂರು ಎನ್ನುವವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಹಳೆಯದಾಗಿದ್ದ ಆ ಕಟ್ಟಡ ಸತತ ಮಳೆಯಿಂದಾಗಿ ಮತ್ತಷ್ಟು ಶಿಥಿಲಗೊಂಡಿತ್ತು. ಅದಕ್ಕೆ ಹೊಂದಿಕೊಂಡಂತೆ ಇದ್ದ ಗೋಡೆಯುನಗರಪಾಲಿಕೆ ಮಾಜಿ ಸದಸ್ಯೆ ಶಶಿಕಲಾ ಸುರೇಕರ ಅವರ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿದ್ದ ಮೂರು ಕುಟುಂಬಗಳು ಅಪಾಯದಲ್ಲಿ ಸಿಲುಕಿದ್ದವು.

ADVERTISEMENT

ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಹೆಸ್ಕಾಂ ಸಿಬ್ಬಂದಿ ಜೆಸಿಬಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಸುರೇಕರ ಕುಟುಂಬದ ಅಶೋಕ, ಶಶಿಕಲಾ, ಪ್ರಕಾಶ, ಲತಾ, ಮಹಾದೇವ, ಕಮಲಾ, ಚಿಂತಾಮಣಿ, ಪ್ರಣವ, ರಚಿತಾ ಹಾಗೂ ಪೂನಂ ಮತ್ತು ವೀರಗಜಾನನ ಪಾಳೇಕರ, ಗಾಯತ್ರಿ ಪಾಳೇಕರ ಅಪಾಯದಿಂದ ಪಾರಾದವರು.

‘ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಅಪಾಯಕ್ಕೆ ಸಿಲುಕಿದ್ದವರನ್ನು ರಕ್ಷಿಸಲಾಗಿದೆ’ ಎಂದು ಖಡೇಬಜಾರ್‌ ಠಾಣೆ ಇನ್‌ಸ್ಪೆಕ್ಟರ್‌ ಧೀರಜ್‌ ಶಿಂಧೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.