ADVERTISEMENT

ಬೆಳಗಾವಿ: ಅಂಚೆ ಇಲಾಖೆಯಿಂದ ಪಿಂಚಣಿ ಅದಾಲತ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 10:53 IST
Last Updated 8 ಜುಲೈ 2021, 10:53 IST
ಬೆಳಗಾವಿಯ ಕೇಂದ್ರ ಅಂಚೆ ಕಚೇರಿಯಲ್ಲಿ ಸೂಪರಿಂಟೆಂಡೆಂಡ್ ಎಚ್‌.ಬಿ. ಹಸಬಿ ನೇತೃತ್ವದಲ್ಲಿ ಪಿಂಚಣಿ ಅದಾಲತ್‌ ಬುಧವಾರ ನಡೆಯಿತು
ಬೆಳಗಾವಿಯ ಕೇಂದ್ರ ಅಂಚೆ ಕಚೇರಿಯಲ್ಲಿ ಸೂಪರಿಂಟೆಂಡೆಂಡ್ ಎಚ್‌.ಬಿ. ಹಸಬಿ ನೇತೃತ್ವದಲ್ಲಿ ಪಿಂಚಣಿ ಅದಾಲತ್‌ ಬುಧವಾರ ನಡೆಯಿತು   

ಬೆಳಗಾವಿ: ಇಲ್ಲಿನ ಕೇಂದ್ರ ಅಂಚೆ ಕಚೇರಿಯಲ್ಲಿ ಬುಧವಾರ ನಡೆದ ಪಿಂಚಣಿ ಅದಾಲತ್‌ನಲ್ಲಿ ಇಲಾಖೆಯ ನಿವೃತ್ತ ನೌಕರರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರು.

ಸೂಪರಿಂಟೆಂಡೆಂಟ್ ಎಚ್‌.ಬಿ. ಹಸಬಿ ಅಧ್ಯಕ್ಷತೆ ವಹಿಸಿದ್ದರು. ಪಿಂಚಣಿದಾರರಿಗೆ ಎಟಿಎಂ ಕಾರ್ಡ್‌ ನೀಡುವುದು, ಆರೋಗ್ಯ ಸರಿ ಇಲ್ಲದವರು ಅಥವಾ ಅಶಕ್ತರು ಅಂಚೆ ಕಚೇರಿಗೆ ಹೋಗಿ ಪಿಂಚಣಿ ಪಡೆಯಲು ಆಗದಿದ್ದಲ್ಲಿ ಮನೆಗಳಿಗೇ ಹೋಗಿ ನೀಡುವಂತೆ ಮಾಡಿದ ಮನವಿಗೆ ಒಪ್ಪಿಗೆ ನೀಡಲಾಯಿತು. ಪೋಸ್ಟ್‌ಮನ್‌ಗಳ ಮೂಲಕ ಈ ಕಾರ್ಯನಿರ್ವಹಣೆ ಮಾಡಿಸಲಾಗುವುದು ಎಂದು ತಿಳಿಸಲಾಯಿತು.

ಎನ್.ಡಿ. ಕುಲಕರ್ಣಿ, ಪಿ.ಆರ್. ಅಮಾಸಿ, ಜಿ.ಜಿ. ದೇಶಪಾಂಡೆ, ಪರಶುರಾಮ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.