ADVERTISEMENT

ಭಾಷೆಗಳ ವಿಷಯದಲ್ಲಿ ಕೆಟ್ಟ ರಾಜಕಾರಣ: ಓ.ಎಲ್. ನಾಗಭೂಷಣಸ್ವಾಮಿ ವಿಷಾದ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 15:19 IST
Last Updated 5 ಅಕ್ಟೋಬರ್ 2019, 15:19 IST
ಬೆಳಗಾವಿಯಲ್ಲಿ ಶನಿವಾರ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿದ ಕಾದಂಬರಿಕಾರ ಡಾ.ಕೃಷ್ಣಮೂರ್ತಿ ಹನೂರು (ಅವರ ಪರವಾಗಿ ಪುತ್ರ ಡಾ.ಅರವಿಂದ್), ಡಾ.ಅಮರೇಶ ನುಗಡೋಣಿ ಮತ್ತು ಸ್ವಾಮಿ ಪೊನ್ನಾಚಿ ಅವರಿಗೆ ಕ್ರಮವಾಗಿ ಕಾದಂಬರಿ, ಕಥಾಸಾಹಿತ್ಯ ಹಾಗೂ ಯುವಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಸದಸ್ಯರಾದ ಬಸವರಾಜ ದಾಸರ, ಡಾ.ಕೆ.ಆರ್. ದುರ್ಗಾದಾಸ್, ಸಾಹಿತಿ ಚಂದ್ರಕಾಂತ ಕುಸನೂರ, ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ, ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ, ಕಾದಂಬರಿಕಾರ ಡಾ.ರಹಮತ್ ತರೀಕೆರೆ, ಸದಸ್ಯರಾದ ರಾಮಕೃಷ್ಣ ಮರಾಠೆ, ಶಿವಕುಮಾರ ಕಟ್ಟೀಮನಿ, ಶಿರೀಷ ಜೋಶಿ ಇದ್ದಾರೆ

ಬೆಳಗಾವಿ: ‘ದೇಶದಲ್ಲಿ ಭಾಷೆಗಳ ವಿಷಯದಲ್ಲಿ ಕೆಟ್ಟ ರಾಜಕಾರಣ ನಡೆಯುತ್ತಿದೆ’ ಎಂದು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಶನಿವಾರ ನಡೆದ ಬಸವರಾಜ ಕಟ್ಟೀಮನಿ 100ನೇ ಜನ್ಮದಿನ, ಕಾದಂಬರಿ, ಕಥಾಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮಗೇ ಗೊತ್ತಿಲ್ಲದೆ ನಮ್ಮ ಭಾಷೆಯ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದೇವೆಯೇ ಎನಿಸುತ್ತಿದೆ. ಈಗ, ಹಿಂದಿಯು ಪ್ರಾಬಲ್ಯದ ಭಾಷೆಯಾಗಿದೆ. ಹೀಗಾಗಿ ಅಧಿಕಾರದ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಯುತ್ತಿದೆ. ಅಧಿಕಾರದ ಬಲ ಹಾಗೂ ಮನೋಭಾವದಿಂದ ಭಾಷೆಗಳನ್ನು ಕೊಲ್ಲುತ್ತಿದ್ದೇವೆ’ ಎಂದರು.

ADVERTISEMENT

‘ಸಂಪರ್ಕ ಭಾಷೆ ಬೇಕು ಎನ್ನುವ ನುಸುಳುವಿಕೆಯಲ್ಲಿ ಕನ್ನಡವನ್ನು ಮೂಲೆಗುಂಪು ಮಾಡುವುದನ್ನು ವಿರೋಧಿಸುತ್ತಿದ್ದೇವೆಯೇ ಹೊರತು ಭಾಷೆಯನ್ನಲ್ಲ. ಈ ಭಾಷಾ ದುರಂತಕ್ಕೆ ನಾವೇ ಕಾರಣ. ಭಾಷೆ ಹೋದರೆ ಇಡೀ ಒಂದು ಸಂಸ್ಕೃತಿಯ ನೆನಪುಗಳು ಹೋಗಿಬಿಡುತ್ತವೆ’ ಎಂದು ಎಚ್ಚರಿಸಿದರು.

ಕಾದಂಬರಿಕಾರ ಡಾ.ರಹಮತ್ ತರೀಕೆರೆ, ‘ದೇಶಪ್ರೇಮ, ಆಹಾರ, ರಾಷ್ಟ್ರೀಯತೆ ಹೆಸರಿನಲ್ಲಿ ಪ್ರಭುತ್ವವು ಕತ್ತಿ ಮಸೆಯುತ್ತಿರುವ ಸಂದರ್ಭವಿದು’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.