ADVERTISEMENT

ಹುಕ್ಕೇರಿ | ಮದಿಹಳ್ಳಿ ಗ್ರಾ.ಪಂ: ಲಕ್ಕವ್ವ ಬಾಗಿ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 12:36 IST
Last Updated 25 ಜುಲೈ 2024, 12:36 IST
ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಗ್ರಾಮ ಪಂಚಾಯ್ತಿಗೆ 2ನೇ ಅವಧಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಕ್ಕವ್ವ ಬಾಗಿ, ಉಪಾಧ್ಯಕ್ಷೆಯಾಗಿ ಕೋಮಲ್ ಹೊಸಮನಿ ಆಯ್ಕೆಯಾದರು
ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಗ್ರಾಮ ಪಂಚಾಯ್ತಿಗೆ 2ನೇ ಅವಧಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಕ್ಕವ್ವ ಬಾಗಿ, ಉಪಾಧ್ಯಕ್ಷೆಯಾಗಿ ಕೋಮಲ್ ಹೊಸಮನಿ ಆಯ್ಕೆಯಾದರು    

ಹುಕ್ಕೇರಿ: ತಾಲ್ಲೂಕಿನ ಮದಿಹಳ್ಳಿ ಗ್ರಾಮ ಪಂಚಾಯ್ತಿಗೆ ಗುರುವಾರ ಎರಡನೇ ಅವಧಿಗೆ ಜರುಗಿದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಲಕ್ಕವ್ವ ಬಾಳಪ್ಪ ಬಾಗಿ ಹೆಚ್ಚು ಮತ ಪಡೆದುಕೊಂಡು ವಿಜಯ ಶಾಲಿಯಾಗಿದ್ದಾರೆ.

ಪಕ್ಕದ ಶಿರಗಾಂವ ಗ್ರಾಮ ಒಳಗೊಂಡ ಈ ಪಂಚಾಯ್ತಿಗೆ ಒಟ್ಟು 19 ಸದಸ್ಯರಿದ್ದಾರೆ. ಗುರುವಾರ ಜರುಗಿದ ಚುನಾವಣೆಯಲ್ಲಿ 18 ಜನ ಹಾಜರಿದ್ದರು. ಚುನಾವನೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 12 ಮತ ಚಲಾವಣೆಯಾದವು. ಇನ್ನೊರ್ವ ಅಭ್ಯರ್ಥಿ ಶಿವಕ್ಕ ಮಾದರ ಅವರಿಗೆ 6 ಮತ ಬಂದವು. ಚುನಾವಣಾ ಅಧಿಕಾರಿ ಎಚ್.ಎ.ಮಾಹುತ್ ಫಲಿತಾಂಶ ಘೋಷಿಸಿದರು.

ಹಿರಿಯ ವಕೀಲ ಕಾಡಪ್ಪ ಕುರಬೇಟ್, ಭೀಮಸೇನ್ ಬಾಗಿ, ಉಪಾಧ್ಯಕ್ಷೆ ಕೋಮಲ್ ಹೊಸಮನಿ, ಮುಖಂಡರಾದ ಕಾಡಪ್ಪ ಹೊಸಮನಿ, ಬಾವುಸಾಬ ಪಾಂಡ್ರೆ, ಪ್ರಶಾಂತ ನಾಗನೂರಿ, ಕೆಂಪಣ್ಣ ಚೌಗಲಾ, ಮಾರುತಿ ಬನ್ನನ್ನವರ, ಮಾರುತಿ ಬಾಗಿ, ಶಿವಾನಂದ ಮುತಗಿ, ಕಾಶವ್ವ ಮುತಗಿ, ಶೋಭಾ ಪಾಟೀಲ್, ಶಂಕ್ರವ್ವ ತಳವಾರ, ರೇಖಾ ಚೌಗಲಾ ಸೇರಿ ಲಕ್ಕವ್ವ ಅಭಿಮಾನಿಗಳು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.