ADVERTISEMENT

ಕಣದಲ್ಲಿ ಕೋಟ್ಯಾಧೀಶರು

​ಪ್ರಜಾವಾಣಿ ವಾರ್ತೆ
Published 25 ಮೇ 2022, 15:15 IST
Last Updated 25 ಮೇ 2022, 15:15 IST

ಬೆಳಗಾವಿ: ಇದೇ ಮೊದಲ ಬಾರಿಗೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ನಾಯಕ ಪ್ರಕಾಶ ಹುಕ್ಕೇರಿ ಕೋಟ್ಯಾಧಿ‍ಪತಿ. ಅವರ ಪತ್ನಿ ನೀಲಾಂಬಿಕಾ ಅವರೂ ಕೋಟಿ ಒಡತಿ.

ಪ್ರಕಾಶ ಹುಕ್ಕೇರಿ ಹೆಸರಿನಲ್ಲಿ ₹ 3.27 ಕೋಟಿ ಮೌಲ್ಯದ ಚರಾಸ್ತಿ ಇದೆ. ಅವರ ಪತ್ನಿ ಹೆಸರಿನಲ್ಲಿ 2.56 ಕೋಟಿ ಆಸ್ತಿ ಇದೆ. ಅವಿಭಕ್ತ ಕುಟುಂಬದ ಹೆಸರಿನಲ್ಲಿ ₹ 2.42 ಕೋಟಿ ಚರಾಸ್ತಿ ಇದೆ ಎಂದು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ನೀಡಿದ್ದಾರೆ. ಅವಿಭಕ್ತ ಕುಟುಂಬದ ಹೆಸರಿನಲ್ಲಿ ₹ 10.78 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ₹ 97.61 ಲಕ್ಷ ಮೌಲ್ಯದ ವಾಹನಗಳಿವೆ. ಪತ್ನಿ ಹೆಸರಿನಲ್ಲಿ ₹ 61.35 ಲಕ್ಷ ಮೌಲ್ಯದ ವಾಹನಗಳಿವೆ ಎಂದು ತಿಳಿಸಿದ್ದಾರೆ.

₹ 37.88 ಲಕ್ಷ ಮೌಲ್ಯದ ಚಿನ್ನಾಭರಣವಿದೆ. ಪತ್ನಿ ಬಳಿ ₹ 31.77 ಲಕ್ಷ ಮೌಲ್ಯದ ಬಂಗಾರ ಮತ್ತು ಆಭರಣಗಳಿವೆ.

ADVERTISEMENT

ಹುಕ್ಕೇರಿ ಅವರು ಬ್ಯಾಂಕ್‌ ಹಾಗೂ ಹಾಗೂ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ₹ 1.95 ಕೋಟಿ ಸಾಲ ಪಡೆದಿದ್ದಾರೆ. ಪತ್ನಿ ಹೆಸರಿನಲ್ಲಿ ₹ 50 ಲಕ್ಷ ಸಾಲವಿದೆ. ಅವಿಭಕ್ತ ಕುಟುಂಬದ ಹೆಸರಿನಲ್ಲಿ ₹ 61 ಲಕ್ಷ ಸಾಲವಿದೆ ಎಂದು ಮಾಹಿತಿ ನೀಡಿದ್ದಾರೆ.

ಸುನೀಲ ಸಂಕ:

ವಾಯುವ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಅವರು ₹ 1.05 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ತಮ್ಮ ಹೆಸರಿನಲ್ಲಿ ₹ .750 ಲಕ್‌ಷ ಮೌಲ್ಯದ ಕಾರು ಹೊಂದಿದ್ದಾರೆ. ಇದಕ್ಕೆ ಬ್ಯಾಂಕ್‌ನಲ್ಲಿ ₹ 3.52 ಲಕ್ಷ ಸಾಲ ಪಡೆದಿದ್ದಾರೆ.

ತಮ್ಮ ಹೆಸರಿನಲ್ಲಿ ₹ 63.80 ಲಕ್ಷ ಮೌಲ್ಯದ ಚರಾಸ್ತಿ ಇದೆ, ₹ 1.33 ಲಕ್ಷ ಬೆಲೆಬಾಳುವ ಬಂಗಾರದ ಆಭರಣಗಳಿವೆ. ₹ 2.60 ಲಕ್ಷ ಮೌಲ್ಯದ 4 ಕೆ.ಜಿ. ಬೆಳ್ಳಿ ಆಭರಣಗಳಿವೆ. ಪತ್ನಿ ಹೆಸರಿನಲ್ಲಿ ₹ 25 ಲಕ್ಷ ಮೌಲ್ಯದ ಚರಾಸ್ತಿ ಇದೆ. ಮಗಳ ಹೆಸರಿನಲ್ಲಿ ₹ 2.18 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ನೀಡಿರುವ ‍ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.