ADVERTISEMENT

ಚಿಕ್ಕೋಡಿ | ಹಿಂದು ಧರ್ಮ ರಕ್ಷಣೆ ಎಲ್ಲರ ಹೊಣೆ: ಪ್ರಾಣಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 14:16 IST
Last Updated 5 ಜನವರಿ 2025, 14:16 IST
ಚಿಕ್ಕೋಡಿ ತಾಲ್ಲೂಕಿನ ಧುಳಗನವಾಡಿ ಗ್ರಾಮದಲ್ಲಿ ಹಮ್ಮಿಕೊಂಡ 100ನೇ ಮಾಸಿಕ ಸತ್ಸಂಗ ಕಾರ್ಯಕ್ರಮವನ್ನು ನಿಪ್ಪಾಣಿ ಪ್ರಾಣಲಿಂಗ ಸ್ವಾಮೀಜಿ, ಹೊಳೆ ಹಿಟ್ನಿಯ ಪ್ರಭುಲಿಂಗ ಶಿವಾಚಾರ್ಯ ಮುಂತಾದವರು ಉದ್ಘಾಟಿಸಿದರು 
ಚಿಕ್ಕೋಡಿ ತಾಲ್ಲೂಕಿನ ಧುಳಗನವಾಡಿ ಗ್ರಾಮದಲ್ಲಿ ಹಮ್ಮಿಕೊಂಡ 100ನೇ ಮಾಸಿಕ ಸತ್ಸಂಗ ಕಾರ್ಯಕ್ರಮವನ್ನು ನಿಪ್ಪಾಣಿ ಪ್ರಾಣಲಿಂಗ ಸ್ವಾಮೀಜಿ, ಹೊಳೆ ಹಿಟ್ನಿಯ ಪ್ರಭುಲಿಂಗ ಶಿವಾಚಾರ್ಯ ಮುಂತಾದವರು ಉದ್ಘಾಟಿಸಿದರು    

ಚಿಕ್ಕೋಡಿ: ‘ಹಿಂದು ಧರ್ಮ ರಕ್ಷಣೆಯಲ್ಲಿ ನಾವೆಲ್ಲರೂ ಟೊಂಕ ಕಟ್ಟಿ ನಿಲ್ಲಬೇಕಾಗಿದೆ’ ಎಂದು ನಿಪ್ಪಾಣಿಯ ವಿರೂಪಾಕ್ಷಲಿಂಗ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಧುಳಗನವಾಡಿ ಗ್ರಾಮದಲ್ಲಿ ಸದ್ಗುರು ಶರಣರ ಕಲಾಸೇವ ಮಂಡಳ ವತಿಯಿಂದ ಖೋತ ಅವರ ತೋಟದಲ್ಲಿ ಭಾನುವಾರ ಹಮ್ಮಿಕೊಂಡ 100ನೇ ಮಾಸಿಕ ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರನ್ನಬೆಳಗಲಿಯ ಸಿದ್ದಾರೂಢ ಮಠದ ಕಾಶಿಬಾಯಿ ಪುರಾಣಿಕ ಅವರು, ಗುರುವಿನ ಮೀರಿಸುವ ಶಿಷ್ಯಂದಿರರೇ ನಿಜವಾದ ಸಾಧಕರು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನ ಅನುಭವ ಮಂಟಪದಲ್ಲಿಯೂ ಹೀಗೆಯೇ ಸತ್ಸಂಗ ನಡೆಯುತ್ತಿತ್ತು. ಇಂತಹ ಸತ್ಸಂಗ ಮನೆ ಮನೆಗೂ, ಗ್ರಾಮ ಗ್ರಾಮಕ್ಕೂ ನಡೆಯಬೇಕು‘ ಎಂದು ಹೇಳಿದರು.

ADVERTISEMENT

ಹೊಳೆ ಹಿಟ್ನಿಯ ಪ್ರಭುಲಿಂಗೇಶ್ವರ ಸ್ವಾಮೀಜಿ, ಶಿರಗೂರಿನ ಅಭಿನವ ಕಲ್ಮೇಶ್ವರ ಮಹಾರಾಜರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರೂರಿನ ಕೇದಾರಲಿಂಗ ಶರಣರು, ಯಾದ್ಯಾನವಾಡಿಯ ಸಿದ್ದನಗೌಡ ಪಾಟೀಲ, ಧುಳಗನವಾಡಿಯ ಚನ್ನಮಲ್ಲಯ್ಯ ಮಠಪತಿ, ಭರತ ಕಲಾಚಂದ್ರ, ಅಪ್ಪಾಸಾಹೇಬ ಖೋತ ಮುಂತಾದವರು ಉಪಸ್ಥಿತರಿದ್ದರು. ರಮೇಶ ಖೋತ ಸ್ವಾಗತಿಸಿ, ಸುಜಾತ ಮಗದುಮ್ಮ ನಿರೂಪಿಸಿ, ಓಂಕಾರ ಖೋತ ವಂದಿಸಿದರು.

ಇದಕ್ಕೂ ಮೊದಲು ಖಡಕಲಾಟ ಲಕ್ಷ್ಮೀ ದೇವಸ್ಥಾನದಿಂದ ಖೋತ ಪರಿವಾರದ ತೋಟದವರೆಗೆ ಸುಮಂಗಲೆಯರು ಶರಣರ ವಚನ ಗ್ರಂಥಗಳನ್ನು ಹೊತ್ತು ಮೆರವಣಿಗೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.