ADVERTISEMENT

ಸವದತ್ತಿ: ಕಳಪೆ ಬೀಜ ಪೂರೈಕೆ ಖಂಡಿಸಿ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:53 IST
Last Updated 18 ಜೂನ್ 2025, 15:53 IST
ಸವದತ್ತಿ ತಾಲ್ಲೂಕಿಮ ಅಸುಂಡಿಯಲ್ಲಿ ಬಿತ್ತಿದ ಗೋವಿನಜೋಳದ ಬೀಜಗಳ ಪರಿಶೀಲನೆ ನಡೆಸಿದ ಮೈಕೋ ಕಂಪನಿ ಸಿಬ್ಬಂದಿ ಹಾಗೂ ರೈತರು
ಸವದತ್ತಿ ತಾಲ್ಲೂಕಿಮ ಅಸುಂಡಿಯಲ್ಲಿ ಬಿತ್ತಿದ ಗೋವಿನಜೋಳದ ಬೀಜಗಳ ಪರಿಶೀಲನೆ ನಡೆಸಿದ ಮೈಕೋ ಕಂಪನಿ ಸಿಬ್ಬಂದಿ ಹಾಗೂ ರೈತರು   

ಸವದತ್ತಿ: ತಾಲ್ನೂಕಿನ ಅಸುಂಡಿ ಗ್ರಾಮದ ಹಲವೆಡೆ ಬಿತ್ತಿದ ಗೋವಿನಜೋಳದ ಬೀಜಗಳು ಮೊಳಕೆಯೊಡೆಯದೇ ಕಮರಿವೆ. ಇವು ಕಳಪೆ ಬೀಜಗಳು ಎಂದು ಆರೋಪಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ರೈತ ಸಂಘದ ತಾಲೂಕಾಧ್ಯಕ್ಷ ಸುರೇಶ ಸಂಪಗಾವಿ, ‘ರಮೇಶ ತೋಟಗಿ ಹಾಗೂ ಸಂಗಪ್ಪ ತೋಟಗಿ ಇವರ 5 ಎಕರೆ ಜಮನೀನಲ್ಲಿ ಮೈಕೋ ಕಂಪನಿ ಗೋವಿನಜೋಳ ಬಿತ್ತಲಾಗಿತ್ತು. ಹತ್ತರಿಂದ ಹನ್ನೆರಡು ದಿನಕಳೆದರೂ ಬೀಜ ಮೊಳಕೆ ಒಡೆದಿಲ್ಲ. ಕಂಪನಿ ಸಿಬ್ಬಂದಿಯನ್ನು ಕರೆಸಿ ಪರಿಶೀಲಿಸಿದಾಗ ಕಳಪೆ ಬೀಜದ ಲಾಟ ಪೂರೈಕೆಯಾಗಿದೆ ಎಂದು ಸ್ವತಃ ಕಂಪನಿಯವರೆ ಒಪ್ಪಿಕೊಂಡಿದ್ದಾರೆ.

ಮೈಕೊ ಕಂಪನಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಈ ಕಂಪನಿ ಬೀಜಗಳನ್ನು ಮಾರಾಟ ಮಾಡುವ ಖಾಸಗಿ ಕೇಂದ್ರಗಳ ಪರವಾನಿಗೆ ರದ್ದು ಪಡಿಸಬೇಕು. ಈಗಾಗಲೆ ಜಮೀನಿನಲ್ಲಿ ಬಿತ್ತಿದ ಬೀಜ ಹಾಗೂ ಖರ್ಚುವೆಚ್ಚಗಳನ್ನು ಕೊಡಬೇಕು. ಅಥವಾ ಎಕರೆಗೆ 30 ಕ್ವಿಂಟಲ್ ಇಳುವರಿ ರಕಮನ್ನು ರೈತನಿಗೆ ನೀಡಬೇಕೆಂದರು. ಬಿತ್ತುವ ಅವಧಿ ಮುಗಿದ ನಂತರ ಒಳ್ಳೆಯ ಬೀಜಗಳನ್ನು ಪಡೆದು ಮಾಡುವದಾದರೂ ಏನು ?
ಬರೀ ಎರಡು ಎಕರೆ ಭೂಮಿ ಹೊಂದಿದ ರೈತ ಬಡ್ಡಿ ದರದಲ್ಲಿ 50 ಸಾವಿರ ಸಾಲ ಪಡೆದು ಬಿತ್ತನೆ ನಡೆಸಿದ್ದ. ಈಗ ಕುಟುಂಬ ನಿರ್ವಹಣೆಯೂ ಚಿಂತಾಜನಕವಾಗಿದೆ. ಕಳೆದ ವರ್ಷ ಇದೇ ಬೀಜವನ್ನೇ ಬಿತ್ತಿ 30 ಕ್ವಿಂಟಲ್ ಇಳುವರಿ ಪಡೆಯಲಾಗಿತ್ತು. ಈಗ ಇವೇ ಕಳಪೆಯಾಗಿವೆ. ಇವತ್ತಿನ ದರದ ಪ್ರಕಾರ ಅಂದಾಜು ಪ್ರತಿ ಕ್ವಿಂಟಲ್ ಗೆ ರೂ. 2400 ದರವಿದೆ. ಒಟ್ಟು 5 ಎಕರೆಗೆ 150 ಕ್ವಿಂಟಲ್ ಗೋವಿನ ಜೋಳದ ಉತ್ಪಾದನೆಯಾಗುತ್ತಿತ್ತು’ ಎಂದು ಆಕ್ರೋಶಿಸಿದರು.

ADVERTISEMENT

ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ, ‘ಮುಂಗಾರು ಹಂಗಾಮಿನಲ್ಲಿ ಹೆಸರು, ಸೋಯಾಬಿನ್, ಹತ್ತಿ, ಈರುಳ್ಳಿ, ಉದ್ದು, ಗೋವಿನಜೋಳ ಬಿತ್ತನೆ ನಡೆದಿದೆ. ಇದಕ್ಕೆ ಅವಶ್ಯವಿರುವ ಡಿಎಪಿ, ಯೂರಿಯಾ ಗೊಬ್ಬರ ಇಲ್ಲದಾಂತಾಗಿದೆ. ಅಧಿಕಾರಿಗಳಿಂದ ಉತ್ತರವೇ ಸಿಗುತ್ತಿಲ್ಲ. ಗೊಬ್ಬರ ದೊರೆತರೂ ಅವಶ್ಯವಿರದ ಲಿಂಕ ಗೊಬ್ಬರ ಖರೀದಿ ಕಡ್ಡಾಯವೆಂದಿದ್ದಾರೆ. ಅಗತ್ಯ ಗೊಬ್ಬರವೂ ಸಹಿತ ಸಮರ್ಪಕವಾಗಿ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

ರಮೇಶ ಹಾಗೂ ಸಂಗಪ್ಪ ತೋಟಗಿ ರೈತರು ಮಾತನಾಡಿ, ‘ಈಗಾಗಲೇ ಬಡತನದಿಂದ ಬೆಂದಿದ್ದೇವೆ. ಪರಿಹಾರ ನೀಡಿದರೆ ಮಾತ್ರ ಬದುಕಲು ಸಾಧ್ಯ.. ಇಲ್ಲವೇ ಕೃಷಿ ಇಲಾಖೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು’ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಘದಿAದ ಕೊನೆಯಲ್ಲಿ ಕೃಷಿ ಎಡಿ ಎಸ್.ವಿ. ಪಾಟೀಲ ರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜಗದೀಶ ತೋಟಗಿ, ಮಲ್ಲಿಕಾರ್ಜುನ ಹುಂಬಿ, ಅಲ್ಲಿಸಾಬ ನೂಲಗಿ, ಗೋರೇಸಾಬ ಸವದತ್ತಿ, ಸುರೇಶ ಅಂಗಡಿ, ಮಹಾಂತೇಶ ಮುತವಾಡ, ಸಿದ್ದಪ್ಪ ಪಟ್ಟದಕಲ್ಲ, ಹನಮಂತ ಹುಡೇದ ಹಾಗೂ ಇತರರು ಇದ್ದರು.

ಕಳಪೆ ಬೀಜ ವಿತರಣೆ ಕುರಿತು ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.