ADVERTISEMENT

ರಾಯಬಾಗ: ಕುರಿಗಳೊಂದಿಗೆ ಪಂಚಾಯಿತಿಗೆ ಮುತ್ತಿಗೆ ಹಾಕಿದ ಕುರಿಗಾಹಿಗಳು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 2:53 IST
Last Updated 1 ಆಗಸ್ಟ್ 2025, 2:53 IST
ರಾಯಬಾಗ ತಾಲ್ಲೂಕಿನ ಖನದಾಳ ಗ್ರಾಮದಲ್ಲಿ ಬುಧವಾರ ಪಿ.ಎಂ.ಕುಸುಮ ಯೋಜನೆಯಡಿ ನಿರ್ಮಾನಗೊಳ್ಳಲಿರುವ ಸೌರ ವಿದ್ಯುತ್ ಉತ್ಪಾದನಾ ಘಟಕ ವಿರೋಧಿಸಿ ಕುರಿಗಾಹಿಗಳು ತಮ್ಮ ಕುರಿಗಳೊಂದಿಗೆ ತೆರಳಿ ಪ್ರತಿಭಟನೆ ನಡೆಸಿದರು
ರಾಯಬಾಗ ತಾಲ್ಲೂಕಿನ ಖನದಾಳ ಗ್ರಾಮದಲ್ಲಿ ಬುಧವಾರ ಪಿ.ಎಂ.ಕುಸುಮ ಯೋಜನೆಯಡಿ ನಿರ್ಮಾನಗೊಳ್ಳಲಿರುವ ಸೌರ ವಿದ್ಯುತ್ ಉತ್ಪಾದನಾ ಘಟಕ ವಿರೋಧಿಸಿ ಕುರಿಗಾಹಿಗಳು ತಮ್ಮ ಕುರಿಗಳೊಂದಿಗೆ ತೆರಳಿ ಪ್ರತಿಭಟನೆ ನಡೆಸಿದರು   

ರಾಯಬಾಗ: ತಾಲ್ಲೂಕಿನ ಕುಡಚಿ ಮತಕ್ಷೇತ್ರದ ಖನದಾಳ ಗ್ರಾಮ ಪಂಚಾಯಿತಿಗೆ ಕುರಿಗಾಹಿಗಳು ತಮ್ಮ ಕುರಿಗಳೊಂದಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗೈರಾಣ ಜಾಗದಲ್ಲಿ ಪಿಎಂ ಕುಸುಮ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಸೌರ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಿಸಲು ಅಧಿಕಾರಿಗಳು ನಿರ್ಧರಿಸಿದ್ದರಿಂದ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಇಲ್ಲಿ ನಿರ್ಮಿಸುವುದರಿಂದ ಕುರಿಗಳು ಮೇಯಲು ಅನಾನುಕೂಲವಾಗಿತ್ತದೆ ಎಂದರು.

ಕುರಿಗಳು ಆಹಾರಕ್ಕಾಗಿ ಎಲ್ಲಿ ಹೋಗಬೇಕೆಂದು ಕುರಿಗಾಹಿಗಳು ಪ್ರಶ್ನಿಸಿದರು. ‘ಈ ಯೋಜನೆ ಇಲ್ಲಿಂದ ಸ್ಥಳಾಂತರಿಸುವಂತೆ ಒತ್ತಾಯಿಸಿ ನಾವು ನಮ್ಮ ಕುರಿಗಳೊಂದಿಗೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ’ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಪ್ರತಿಭಟನಾ ನಿರತ ಕುರಿಗಾಹಿಗಳು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.