ADVERTISEMENT

ಸೇನಾ ನೇಮಕಾತಿ ಪರೀಕ್ಷೆಗೆ ಆಗ್ರಹ

ಯುವಜನರ ಪ್ರತಿಭಟನೆಗೆ ಸಾಥ್‌ ನೀಡಿದ ಶಾಸಕಿ ಡಾ.ಅಂಜಲಿ ನಿಂಬಾಳಕರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 16:11 IST
Last Updated 18 ಜೂನ್ 2022, 16:11 IST
ಸೇನಾ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಖಾನಾಪುರದಲ್ಲಿ ಶನಿವಾರ ಯುವಜನರು ಪ್ರತಿಭಟನೆ ನಡೆಸಿದರು
ಸೇನಾ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಖಾನಾಪುರದಲ್ಲಿ ಶನಿವಾರ ಯುವಜನರು ಪ್ರತಿಭಟನೆ ನಡೆಸಿದರು   

ಖಾನಾ‍ಪುರ: ಈ ಹಿಂದೆಯೇ ಸೇನೆಗೆ ಸೇರಬಯಸುವ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿದ್ದು, ಲಿಖಿತ ಪರೀಕ್ಷೆಯನ್ನೂ ಕೂಡಲೇ ನಡೆಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ಯುವಕರು ಮೆರವಣಿಗೆ ನಡೆಸಿದರು. ಶಾಸಕಿ ಡಾ.ಅಂಜಲಿ ನಿಂಬಾಳಕರ ಕೂಡ ಮೆರವಣಗೆಗೆ ಸಾಥ್‌ ನೀಡಿದರು.

ಇಲ್ಲಿನ ಮಲಪ್ರಭಾ ಕ್ರೀಡಾಂಗಣದಿಂದ ಆರಂಭವಾದ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಬಸವೇಶ್ವರ ಸರ್ಕಲ್‌, ಬೆಳಗಾವಿ– ಖಾನಾಪುರ ಹೆದ್ದಾರಿ ಮೂಲಕ ಸಾಗಿ ಶಿವಸ್ಮಾರ ವೃತ್ತ ಸೇರಿತು. ಸೇನಾ ನೇಮಕಾತಿ ಸೇರಬಯಸುವ ಹಲವು ಯುವಕರು ಅಲ್ಲಿ ಸಮಾವೇಶಗೊಂಡರು.

ಈ ಹಿಂದಿನ ಸೇಮಾ ನೇಮಕಾತಿ ಲಿಖತ ಪರೀಕ್ಷೆಯನ್ನು ನಡೆಸದೇ, ಈಗ ಹೊಸದಾಗಿ ಅಗ್ನಿಪಥ ಆಂಭಿಸಿದೆ. ಇದು ಖಂಡನಾರ್ಹ ಎಂದು ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ಹೊರಹಾಕಿದರು.

ADVERTISEMENT

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಾ.ಅಂಜಿಲಿ, ಸೇನಾ ಭರ್ತಿಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡರೂ ಖಾಲಿ ಕುಳಿತುಕೊಳ್ಳುವಂತಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಯುವ ಸಮುದಾಯದ ಮೇಲೆ ತೋರಿದ ಧೋರಣೆ ಖಂಡನಾರ್ಹ’
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.