ಬೆಳಗಾವಿ: ‘ತಾಲ್ಲೂಕಿನ ಮರಣಹೋಳ ಗ್ರಾಮದಲ್ಲಿ ಅಕ್ರಮ– ಸಕ್ರಮ ಯೋಜನೆ ಅಡಿ ಮಂಜೂರಾದ 144 ಎಕರೆ ಸರ್ಕಾರಿ ಭೂಮಿ ಹಂಚಿಕೆ ಕಾನೂನಾತ್ಮಕ ಆಗಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಿ, ಪರೀಶಿಲನೆ ನಡೆಸಿ ಭೂಮಿಯನ್ನ ಮರಳಿ ವಶಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
144 ಎಕರೆ ಜಮೀನು ಕಾನೂನು ಬಾಹಿರವಾಗಿ ಮಂಜೂರಾಗಿದೆ. ‘ನಮೂನೆ–53’ ಅಕ್ರಮ ಸಕ್ರಮ ಕಮಿಟಿಯ ಮುಂದೆ ಪ್ರಸ್ತಾವ ಆಗಿಲ್ಲ. ಸ್ಥಾನಿಕ ಚೌಕಾಶಿಯನ್ನು ಮಾಡದೇ, ಹದ್ದುಬಸ್ತು ಸರಿಯಾಗಿ ನೋಡದೇ, 1990ರಲ್ಲಿ ಅರ್ಜಿ ಸಲ್ಲಿಸಿದವರ ಹೆಸರಿಗೆ ನೀಡಲಾಗಿದೆ. ಆಗ ಅವರ ವಯಸ್ಸು ಎಷ್ಟು ಎಂಬುದನ್ನೂ ಪರಿಶೀಲನೆ ಮಾಡದೇ 38 ಮಂದಿಗೆ ಕೊಡಲಾಗಿದೆ. ಅಲ್ಲದೇ ಇಬ್ಬ ಮಹಾರಾಷ್ಟ್ರದ ಶಿಕ್ಷಕಿಗೂ ಜಮೀನು ನೀಡಲಾಗಿದೆ. ಇವೆಲ್ಲವೂ ಕಾನೂನು ಬಾಹಿರ. ಈ ಭೂಮಿಯನ್ನು ಮರಳಿ ವಶಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.
‘ಈ ಹಿಂದೆ ಚಿಕ್ಕಮಂಗಳೂರಿನಲ್ಲಿ ಇಂಥದ್ದೇ ಪ್ರಕರಣವಾದಾಗ ಜಿಲಾಧಿಕಾರಿ ತಂಡ ರಚಿಸಿ ಸಮಸ್ಯೆ ಬಗೆಹರಿಸಲಾಗಿತ್ತು. ಮರಣಹೋಳ ಗ್ರಾಮದಲ್ಲೂ ಇದೇ ಕ್ರಮ ಜರುಗಿಸಬೇಕು’ ಎಂದೂ ಮನವಿಯಲ್ಲಿ ಕೋರಿದ್ದಾರೆ.
ಮನವಿಗೆ ಪಕ್ಷದ ಮುಖಂಡರು ಹಾಗೂ ಕೆಲ ಗ್ರಾಮಸ್ಥರು ಸಹಿ ಮಾಡಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.