ADVERTISEMENT

PUC Results | ಮೂರು ವರ್ಷಗಳಿಂದ ಸುಧಾರಣೆ ಕಾಣದ ಬೆಳಗಾವಿ, ಚಿಕ್ಕೋಡಿ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 9:48 IST
Last Updated 8 ಏಪ್ರಿಲ್ 2025, 9:48 IST
   

ಬೆಳಗಾವಿ: ಈ ಬಾರಿ ದ್ವಿತೀಯ ಪಿಯು ಫಲಿತಾಂಶದಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ (ಶೇ 65.37) ರಾಜ್ಯಕ್ಕೆ 26ನೇ ಸ್ಥಾನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ (ಶೇ 66.76) 24ನೇ ಸ್ಥಾನ ಪಡೆದುಕೊಂಡಿವೆ. ಕಳೆದ ಮೂರು ವರ್ಷಗಳಲ್ಲಿ ಎರಡೂ ಜಿಲ್ಲೆಗಳ ಶೈಕ್ಷಣಿಕ ಸಾಧನೆ ಅಷ್ಟೇನು ಸುಧಾರಣೆ ಕಂಡಿಲ್ಲ.

2023ರಲ್ಲಿ 25ನೇ ಸ್ಥಾನದಲ್ಲಿದ್ದ ಬೆಳಗಾವಿ ಜಿಲ್ಲೆ 2024ರಲ್ಲಿ 27ನೇ ಸ್ಥಾನಕ್ಕೆ ಕುಸಿದಿತ್ತು. ಈ ವರ್ಷ ಒಂದು ಸ್ಥಾನ ಮಾತ್ರ ಮೇಲಕ್ಕೆ ಹೋಗಿದೆ. 2023ರಲ್ಲಿ 16ನೇ ಸ್ಥಾನದಲ್ಲಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 2024ರಲ್ಲಿ 15ನೇ ಸ್ಥಾನಕ್ಕೆ ಏರಿತ್ತು. ಆದರೆ, ಈ ಬಾರಿ 24ನೇ ಸ್ಥಾನಕ್ಕೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT