ಕಬ್ಬೂರಿನಲ್ಲಿ ಬುಧವಾರ ಸುರಿದ ಮಳೆ–ಗಾಳಿಯಿಂದ ಸುರೇಖಾ ಗುರವ ಅವರ ಮನೆ ಪತ್ರಾಸ್ ಹಾರಿಹೋಗಿದೆ
ಪ್ರಜಾವಾಣಿ ಚಿತ್ರ
ಕಬ್ಬೂರ (ಚಿಕ್ಕೋಡಿ ತಾಲ್ಲೂಕು): ಗ್ರಾಮದಲ್ಲಿ ಬುಧವಾರ ಗುಡುಗು–ಮಿಂಚು ಸಹಿತವಾಗಿ ಉತ್ತಮ ಮಳೆ ಸುರಿಯಿತು.
ಮಳೆಯೊಂದಿಗೆ ಗಾಳಿಯೂ ಜೋರಾಗಿ ಬೀಸಿದ್ದರಿಂದ ನಾಲ್ಕು ಮನೆಗಳ ಪತ್ರಾಸ್, ಹೆಂಚು ಹಾರಿಹೋಗಿದ್ದು, ಒಂದು ಮನೆಯ ಗೋಡೆ ಕುಸಿದಿದೆ. ವಿದ್ಯುತ್ ಪೂರೈಕೆ ಸ್ಥಗಿತವಾದ ಕಾರಣ, ಜನರು ಪರದಾಡಿದರು.
ಚಿಕ್ಕೋಡಿ, ಸವದತ್ತಿಯಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ, ಬೈಲಹೊಂಗಲದಲ್ಲಿ ಕೆಲಕಾಲ ತುಂತುರು ಮಳೆಯಾಯಿತು. ಗೋಕಾಕ ತಾಲ್ಲೂಕಿನ ಅಂಕಲಗಿ, ಮದವಾಲ, ಅಕ್ಕತಂಗೇರಹಾಳ ಮತ್ತು ಬೆಳಗಾವಿ ತಾಲ್ಲೂಕಿನ ಸುಲಧಾಳದಲ್ಲಿ ಸಾಧಾರಣ ಮಳೆಯಾಯಿತು. ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.