ADVERTISEMENT

ಯಕ್ಸಂಬಾದಲ್ಲಿ‌ ಭಾರೀ ಮಳೆ | ವೃದ್ಧೆ ಸಾವು, ಕೊಚ್ಚಿಹೋದ ವಾಹನಗಳು

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 8:41 IST
Last Updated 24 ಜೂನ್ 2019, 8:41 IST
ಭಾರಿ ಮಳೆಗೆ ರಸ್ತೆಗಳಲ್ಲಿ‌ ಹಳ್ಳದಂತೆ ನೀರು ಹರಿಯಿತು. ನೀರಿನ ರಭಸಕ್ಕೆ ಕಾರ್, ದ್ವಿಚಕ್ರವಾಹನಗಳು ಕೊಚ್ಚಿಕೊಂಡು ಹೋದವು.
ಭಾರಿ ಮಳೆಗೆ ರಸ್ತೆಗಳಲ್ಲಿ‌ ಹಳ್ಳದಂತೆ ನೀರು ಹರಿಯಿತು. ನೀರಿನ ರಭಸಕ್ಕೆ ಕಾರ್, ದ್ವಿಚಕ್ರವಾಹನಗಳು ಕೊಚ್ಚಿಕೊಂಡು ಹೋದವು.   

ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ರಸ್ತೆಗಳಲ್ಲಿ‌ ಹಳ್ಳದಂತೆ ನೀರು ಹರಿಯಿತು.
ನೀರಿನ ರಭಸಕ್ಕೆ ಕಾರ್, ದ್ವಿಚಕ್ರವಾಹನಗಳು ಕೊಚ್ಚಿಕೊಂಡು ಹೋದವು.

ಅಂಬೇಡ್ಕರ್ ನಗರದ ಮನೆಯೊಂದರಲ್ಲಿ ನೀರು ನುಗ್ಗಿದ್ದು, ಆ ಮನೆಯಲ್ಲಿ ಅನಾರೋಗ್ಯದಿಂದ ಮಂಚದ ಮೇಲೆ ಮಲಗಿದ್ದ ವೃದ್ದೆ ಚಂಪಾ ಬಾಯಿ ಸಿಂಧೆ ಎಂಬುವರು ಸೋಮವಾರ ಬೆಳಿಗ್ಗೆ ನಿಧನರಾದರು.

ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೀರು ನುಗ್ಗಿದ್ದು, ಬೆಳಿಗ್ಗೆ ಸಿಬ್ಬಂದಿ ಕೇಂದ್ರದೊಳಗಿನ ಕೆಸರು ಸ್ವಚ್ಛ ಗೊಳಿಸುತ್ತಿದ್ದರು.

ADVERTISEMENT

ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ರಾತ್ರಿ ಯಕ್ಸಂಬಾ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿಪ್ಪಾಣಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸಂಸತ್ ಅಧಿವೇಶನದಲ್ಲಿ ಇರುವುದರಿಂದ ಹಾಗೂ ನನ್ನ ಸ್ವಂತ ಗ್ರಾಮದ ಜನತೆಗೆ ಆಗಿರುವ ತೊಂದರೆಗೆ ಸ್ಪಂದಿಸುವ ಕರ್ತವ್ಯ ನನ್ನದಾಗಿದೆ. ಹೀಗಾಗಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಪರಿಸ್ಥಿತಿಯ ಕುರಿತು ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ‌ ಜೊಲ್ಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.