ಬೆಳಗಾವಿಯ ಅನಗೋಳ ಪ್ರದೇಶದ ಸಂತ ಮೀರಾ ಶಾಲೆ ಬಳಿ ಶುಕ್ರವಾರ ಬಿರುಗಾಳಿ, ಮಳೆಯ ಕಾರಣ ಮರವೊಂದು ಕಾರಿನ ಮೇಲೆ ಬಿದ್ದಿದೆ
ಬೆಳಗಾವಿ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಒಂದು ತಾಸಿನವರೆಗೆ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ 5ರ ಸುಮಾರಿಗೆ ಆರಂಭವಾದ ಮಳೆ ಗುಡುಗು– ಮಿಂಚಿನ ಜತೆಗೆ ಸುರಿಯಿತು.
ಇಲ್ಲಿನ ಅನಗೋಳ ಪ್ರದೇಶದಲ್ಲಿರುವ ಸಂತ ಮೀರಾ ಶಾಲೆಯ ಬಳಿ ಮಳೆ, ಗಾಳಿಯ ರಭಸಕ್ಕೆ ಮರವೊಂದು ಬುಡಸಮೇತ ಕಿತ್ತು ಕಾರಿನ ಮೇಲಿ ಬಿದ್ದಿದೆ. ಕಾರು ಜಖಂಗೊಂಡಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಮಹಾದ್ವಾರ ರಸ್ತೆ, ಭೋವಿ ಗಲ್ಲಿಯಲ್ಲಿ ರಸ್ತೆ ಮೇಲೆ ಹರಿದ ನೀರು ವ್ಯಾಪಾರ– ವಹಿವಾಟಿಗೆ ತೊಂದರೆ ಮಾಡಿದೆ. ಕ್ಯಾಂಪ್ ಪ್ರದೇಶದಲ್ಲಿ ರಸ್ತೆಯ ಮಧ್ಯದಲ್ಲೇ ಡಾಂಬರ್ ಕಿತ್ತುಕೊಂಡು ಬಂದಿದೆ.
ಉಳಿದಂತೆ ರಾಮದುರ್ಗ, ರಾಯಬಾಗ, ಬೈಲಹೊಂಗಲ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.