ADVERTISEMENT

ನಿಪ್ಪಾಣಿ: 6 ಮನೆಗಳು ಸಂಪೂರ್ಣ ನಾಶ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:14 IST
Last Updated 25 ಜುಲೈ 2024, 15:14 IST
ನಿಪ್ಪಾಣಿ ಹುನ್ನರಗಿ ಗ್ರಾಮದ ಲಕ್ಷ್ಮಿ ನಾರಾಯಣ ಮಂದಿರಕ್ಕೆ ವೇದಗಂಗಾ ನದಿ ದಡದ ನೀರು ನುಗ್ಗಿದೆ
ನಿಪ್ಪಾಣಿ ಹುನ್ನರಗಿ ಗ್ರಾಮದ ಲಕ್ಷ್ಮಿ ನಾರಾಯಣ ಮಂದಿರಕ್ಕೆ ವೇದಗಂಗಾ ನದಿ ದಡದ ನೀರು ನುಗ್ಗಿದೆ   

ನಿಪ್ಪಾಣಿ: ಕಳೆದ 24 ಗಂಟೆಯಲ್ಲಿ ತಾಲ್ಲೂಕಿನಲ್ಲಿ 12.22 ಸೆಂ.ಮೀ ಮಳೆ ಸುರಿದಿದೆ. ಇಲ್ಲಿಯವರೆಗೆ 6 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. 26 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಜಾಮದಾರ ಪ್ಲಾಟ್‌ನಲ್ಲಿ ಸಮ್ಮೇದ ಮೊಹಮ್ಮದ್‌ ನಾಯಿವಾಡಿ ಎಂಬುವವರಿಗೆ ಸೇರಿದ ಮನೆಯೊಂದು ಬುಧವಾರ ರಾತ್ರಿ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಯಾವುದೇ ಜೀವಿ ಹಾನಿಯಾಗಿಲ್ಲ.

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಅತಿಯಾಗಿ ಆಗುತ್ತಿರುವ ಮಳೆಯ ಪರಿಣಾಮ ವೇದಗಂಗಾ ಹಾಗೂ ದೂಧಗಂಗಾ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಹುನ್ನರಗಿ ಗ್ರಾಮದ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ವೇದಗಂಗಾ ನದಿ ದಡದ ನೀರು ಸುಮಾರು 5 ಅಡಿಯಷ್ಟು ನುಗ್ಗಿದೆ.

ಕಾಳಮ್ಮಾವಾಡಿ ಜಲಾಶಯ ಶೇ 71ರಷ್ಟು, ಪಾಟಗಾವ ಜಲಾಶಯ ಶೇ 91ರಷ್ಟು ಭರ್ತಿಯಾಗಿದೆ. ಇನ್ನು ರಾಧಾನಗರಿ ಡ್ಯಾಂ ಸಂಪೂರ್ಣವಾಗಿ ತುಂಬಿದ್ದು ಬೆಳಿಗ್ಗೆಯಿಂದ ಸಂಜೆಯವರೆಗೆ ಅದರ 6 ಗೇಟ್‌ಗಳನ್ನು ತೆರೆದ ಪರಿಣಾಮ ಪ್ರವಾಹದ ಭೀತಿ ಎದುರಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.