ADVERTISEMENT

ಆರೋಪ ಬಂದಾಗಲೇ ರಮೇಶ ರಾಜೀನಾಮೆ ಕೊಡಬೇಕಿತ್ತು: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 15:42 IST
Last Updated 3 ಮಾರ್ಚ್ 2021, 15:42 IST
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ   

ಬೆಳಗಾವಿ: ‘ಆರೋಪ ಕೇಳಿಬಂದ ಕೂಡಲೇ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಒಂದು ದಿನ ಕಾಯುವ ಅಗತ್ಯವಿರಲಿಲ್ಲ’ ಎಂದು ಸಹೋದರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಗೋಕಾಕದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷ, ಆಡಳಿತ ಪಕ್ಷ ಹಾಗೂ ಜನರ ಆಗ್ರಹದಂತೆ ರಾಜೀನಾಮೆ ನೀಡಿದ್ದಾರೆ. ಈಗ
ನೈತಿಕತೆಯ ವಿಚಾರ ಮುಗಿದಿದೆ. ಇನ್ನೇನಿದ್ದರೂ ಕಾನೂನು ಹೋರಾಟವಷ್ಟೆ. ಆ ಸಿ.ಡಿ. ನಕಲಿಯೋ, ಅಸಲಿಯೋ ಎನ್ನುವುದನ್ನು ಪೊಲೀಸರು ತನಿಖೆ ಮಾಡಬೇಕು. ಸತ್ಯ ಬಯಲಿಗೆಳೆಯಬೇಕು’ ಎಂದರು.

‘ನಾವು ಸಹೋದರರಿರಬಹುದು. ಆದರೆ, ಪಕ್ಷ ಬೇರೆ. ಪಕ್ಷವೆಂದು ಬಂದಾಗ ನಮ್ಮ ಪಕ್ಷದ ಪರ ನಿಲ್ಲುತ್ತೇವೆ. ಎಲ್ಲದ್ದಕ್ಕೂ ಕುಟುಂಬ ಬೆರೆಸುವುದು ಸರಿಯಲ್ಲ’ ಎಂದು ಹೇಳಿದರು.

‘ರಮೇಶಗೆ ಅವರ ಪಕ್ಷದಲ್ಲೂ ಆಗದವರು ಇರುತ್ತಾರೆ. ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.