ADVERTISEMENT

‘ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿಯೇ ತೀರುತ್ತೇವೆ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 16:19 IST
Last Updated 3 ನವೆಂಬರ್ 2020, 16:19 IST

ಬೆಳಗಾವಿ: ‘ಇಲ್ಲಿನ ಶಾಹೂನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿಯೇ ತೀರುತ್ತೇವೆ. ಅದನ್ನು ಯಾರಿಂದಲೂ ತಡೆಯಲಾಗುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಎಲ್ಲಿಯೇ ಸ್ಥಾಪಿಸಿದರೂ ಹೋಗಿ ಸಂಘಟಕರಿಗೆ ಬೆಂಬಲ ನೀಡುತ್ತೇವೆ. ಇದಕ್ಕಾಗಿ ರಸ್ತೆಗಿಳಿದು ಪ್ರತಿಭಟಿಸಲು ಮತ್ತು ಪ್ರಾಣ ತ್ಯಾಗಕ್ಕೂ ಸಿದ್ಧವಿದ್ದೇವೆ’ ಎಂದು ಕರವೇ ಶಾಹೂನಗರ ಘಟಕದ ಅಧ್ಯಕ್ಷ ಸಂಪತ್‌ಕುಮಾರ್‌ ದೇಸಾಯಿ ತಿಳಿಸಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನ.1ರಂದು ಪ್ರತಿಮೆ ಪ್ರತಿಷ್ಠಾಪಿಸದಂತೆ ತಡೆದರು. ನಮ್ಮನ್ನು ವಶಕ್ಕೆ ಪಡೆದರು. ಕಾಕತಿಯ ಮೂರ್ತಿಕಾರ ಮಹೇಶ ಮಾಸೇಕರ ಅವರ ಮೇಲೆ ಬೂಟಿನಿಂದ ಒದ್ದು, ತಲೆಗೆ ಹೊಡೆದು ಅವಮಾನಿಸಿದರು. ನಮ್ಮನ್ನು ಭಯೋತ್ಪಾದಕರ ರೀತಿಯಲ್ಲಿ ನಡೆಸಿಕೊಂಡರು. ಕೆಟ್ಟದಾಗಿ ಬೈದರು’ ಎಂದು ದೂರಿದರು.

‘ಮೂರ್ತಿಕಾರರ ಶೆಡ್‌ನಲ್ಲಿದ್ದ ನಾಲ್ಕು ರಾಯಣ್ಣನ ಮೂರ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಇಟ್ಟುಕೊಂಡಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಜೀವನ ನಿರ್ವಹಣೆಗೆ ಮೂರ್ತಿ ತಯಾರಿಸುವ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಅಪಮಾನಿಸಿದ ಪೊಲೀಸರ ಕ್ರಮ ತೀವ್ರ ಖಂಡನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.