ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಡವಟ್ಟು | ವಿದ್ಯಾರ್ಥಿನಿಗೆ 100ಕ್ಕೆ 101 ಅಂಕ!

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 14:53 IST
Last Updated 11 ಜೂನ್ 2019, 14:53 IST
ಫಲಿತಾಂಶ ಪಟ್ಟಿಯಲ್ಲಿ 100ಕ್ಕೆ 101 ಅಂಕ ನೀಡಿದ್ದ ಮಾಹಿತಿ
ಫಲಿತಾಂಶ ಪಟ್ಟಿಯಲ್ಲಿ 100ಕ್ಕೆ 101 ಅಂಕ ನೀಡಿದ್ದ ಮಾಹಿತಿ   

ಅಥಣಿ: ವಿದ್ಯಾರ್ಥಿನಿಯೊಬ್ಬರಿಗೆ 100ಕ್ಕೆ 101 ಅಂಕ ನೀಡುವ ಮೂಲಕ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಡವಟ್ಟು ಮಾಡಿದೆ.

ಅಥಣಿಯ ಬಿ.ಕಾಂ. 6ನೇ ಸೆಮಿಸ್ಟರ್‌ ವಿದ್ಯಾರ್ಥಿನಿ ಶೈಲಶ್ರೀ ಸಾಂವಗಾಂವಗೆ (ರಿ.ನಂ. ಸಿ1617334) ‘ಮಾಡರ್ನ್‌ ಆಡಿಟಿಂಗ್‌ ಅಂಡ್ ಪ್ರಾಕ್ಟೀಸಸ್‌’ ವಿಷಯದಲ್ಲಿ 101 ಅಂಕ ನೀಡಿರುವುದು ವಿದ್ಯಾರ್ಥಿನಿ ಸೇರಿದಂತೆ ಕಾಲೇಜಿನ ಎಲ್ಲರ ಅಚ್ಚರಿಗೂ ಕಾರಣವಾಗಿತ್ತು.

ವೆಬ್‌ಸೈಟ್‌ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಈ ಮಾಹಿತಿ ಇತ್ತು. ವಿಷಯ ತಿಳಿದ ನಂತರ ಆ ವಿದ್ಯಾರ್ಥಿನಿಯ ರಿಸ್ಟಲ್‌ ಶೀಟನ್ನೇ ಅಳಿಸಿ ಹಾಕಲಾಗಿದೆ. ಹೀಗಾಗಿ, ತಾನು ಗಳಿಸಿದ್ದು ಎಷ್ಟು ಅಂಕ ಎನ್ನುವುದು ತಿಳಿಯದೇ ವಿದ್ಯಾರ್ಥಿನಿ ಗೊಂದಲಕ್ಕೆ ಒಳಗಾಗಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯೆಗೆ ಕುಲಸಚಿವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.