ADVERTISEMENT

ನಿವೃತ್ತ ಪಿಎಸ್‌ಐ ನಿಧನ: ಅಂಗಾಂಗ, ದೇಹ ದಾನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 13:44 IST
Last Updated 12 ಆಗಸ್ಟ್ 2021, 13:44 IST
ಬಸವರಾಜ ಕಾಡನ್ನವರ
ಬಸವರಾಜ ಕಾಡನ್ನವರ   

ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ನಿವಾಸಿ, ನಿವೃತ್ತ ಪಿಎಸ್‌ಐ ಹಾಗೂ ಲಿಂಗಾಯತ ಸಂಘಟನೆ ಸದಸ್ಯ ಬಸವರಾಜ ವೀರಭದ್ರಪ್ಪ ಕಾಡನ್ನವರ (76) ನಿಧನರಾದರು.

ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ.

ಬಸವರಾಜ ಅವರ ಅಂತಿಮ ಇಚ್ಛೆಯಂತೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್‌ ವತಿಯಿಂದ ನೇತ್ರ, ಚರ್ಮ ಹಾಗೂ ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಣ್ಣುಗಳನ್ನು ಕೆಎಲ್‌ಇ ಪ್ರಭಾಕರ ಕೋರೆ ನೇತ್ರ ಭಂಡಾರಕ್ಕೆ ನೀಡಿ, ಇಬ್ಬರು ದೃಷ್ಟಿದೋಷವುಳ್ಳವರ ಬಾಳಿಗೆ ಬೆಳಕಾಗಿದ್ದಾರೆ. ಕೆಎಲ್‌ಇ–ರೋಟರಿ ಚರ್ಮ ಬ್ಯಾಂಕ್‌ಗೆ ಚರ್ಮ ನೀಡಲಾಗಿದೆ. ಕೆಎಲ್‌ಇ ಸಂಸ್ಥೆಯು ಚಿಕ್ಕೋಡಿಯಲ್ಲಿ ಆರಂಭಿಸಿರುವ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದೇಹವನ್ನು ದಾನವಾಗಿ ನೀಡಲಾಗಿದೆ.

ADVERTISEMENT

ಕಾಡನ್ನವರ ಕುಟುಂಬವನ್ನು ನೇತ್ರ ಭಂಡಾರದ ಡಾ.ಅರವಿಂದ ತೇಣಗಿ, ಚರ್ಮ ಬ್ಯಾಂಕ್‌ನ ಡಾ.ರಾಜೇಶ ಪವಾರ, ಕೆಎಲ್ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಕಿರಣ ಮುತನಾಳೆ, ಡಾ.ವಿಜಯ ಪಾಟೀಲ, ಶರೀರರಚನಾ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.