ADVERTISEMENT

ಮರುಮೌಲ್ಯಮಾಪನ: ಅಪೂರ್ವಾಗೆ 14 ಅಂಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 1:33 IST
Last Updated 7 ಸೆಪ್ಟೆಂಬರ್ 2020, 1:33 IST
ಅಪೂರ್ವಾ ಬಾಹುಬಲಿ ಟೋಪಗಿ
ಅಪೂರ್ವಾ ಬಾಹುಬಲಿ ಟೋಪಗಿ   

ಮೋಳೆ (ಬೆಳಗಾವಿ ಜಿಲ್ಲೆ): ಇಲ್ಲಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ ಅಪೂರ್ವಾ ಬಾಹುಬಲಿ ಟೋಪಗಿ ಅವರಿಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ 14 ಅಂಕಗಳು ಹೆಚ್ಚುವರಿಯಾಗಿ ಲಭಿಸಿವೆ. ಇದರೊಂದಿಗೆ, ಒಟ್ಟು ಅಂಕಗಳು 617ಕ್ಕೆ ಏರಿಕೆಯಾಗಿವೆ.

‘ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಅಪೂರ್ವಾ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದಾರೆ. ದೃಷ್ಟಿದೋಷವುಳ್ಳ ವಿದ್ಯಾರ್ಥಿನಿಯರ ಪೈಕಿ ಉತ್ತಮ ಸಾಧನೆ ತೋರಿದ್ದಾರೆ ಎಂದು ಶಾಲೆಯವರು ಮಾಹಿತಿ ನೀಡಿದ್ದಾರೆ’ ಎಂದು ತಂದೆ ಬಾಹುಬಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರುಮೌಲ್ಯಮಾಪನದ ಬಳಿಕ ಇಂಗ್ಲಿಷ್‌ನಲ್ಲಿ 91ರಿಂದ 96, ರಾಜ್ಯಶಾಸ್ತ್ರದಲ್ಲಿ 98ರಿಂದ 100, ಅರ್ಥಶಾಸ್ತ್ರದಲ್ಲಿ 98ರಿಂದ 100 ಮತ್ತು ಸಮಾಜವಿಜ್ಞಾನದಲ್ಲಿ 93ರಿಂದ 98ಕ್ಕೆ ಏರಿಕೆಯಾಗಿದೆ.

ADVERTISEMENT

‘ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತ ವಿಷಯಗಳ ಬದಲಾಗಿ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಷಯ ತೆಗೆದುಕೊಳ್ಳಲು ಅವಕಾಶವಿದೆ. ಹೀಗಾಗಿ ಈ ವಿಷಯಗಳನ್ನು ತೆಗೆದುಕೊಂಡೆ’ ಎಂದು ಅಪೂರ್ವಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.