
ಪ್ರಜಾವಾಣಿ ವಾರ್ತೆ
ಎಐ ಚಿತ್ರ
ಬೆಳಗಾವಿ: ‘₹400 ಕೋಟಿ ದರೋಡೆ ಬಗ್ಗೆ ಬೆಳಗಾವಿ ಪೊಲೀಸರು ತನಿಖೆ ಮಾಡುವ ಭರವಸೆ ನೀಡಿದರೆ, ನಾನು ಖುದ್ದಾಗಿ ದೂರು ದಾಖಲಿಸುತ್ತೇನೆ’ ಎಂದು ಪ್ರಕರಣದಲ್ಲಿ ಅಪಹರಣವಾಗಿ ಬಿಡುಗಡೆಯಾಗಿರುವ ಸಂದೀಪ್ ಪಾಟೀಲ ಬುಧವಾರ ನಾಸಿಕ್‌ನಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಂದೀಪ್, ‘ಗೋವಾದಿಂದ ಹೊರಟಿದ್ದ ಕಂಟೇನರ್‌ಗಳನ್ನು ಕರ್ನಾಟಕ ಗಡಿಯಲ್ಲೇ ದರೋಡೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನನಗೆ ಜಯೇಶ ಕದಮ್ ಹೇಳಿದ್ದಾನೆ. ಇದನ್ನು ಆಧರಿಸಿಯೇ ಮಹಾರಾಷ್ಟ್ರದ ಎಸ್‌ಐಟಿಗೂ ಹೇಳಿಕೆ ನೀಡಿದ್ದೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.