ADVERTISEMENT

ಸಕ್ಕರೆ ಕಾರ್ಖಾನೆ ಪುನರುಜ್ಜೀವನಕ್ಕೆ ಕ್ರಮ: ಸಂಸದ ಅಣ್ಣಾಸಾಹೇಬ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 1:53 IST
Last Updated 7 ಅಕ್ಟೋಬರ್ 2025, 1:53 IST
<div class="paragraphs"><p> ಸಂಕೇಶ್ವರದ&nbsp;ಹಿರಣ್ಯಕೇಶಿ ಸಹಕಾರಿ&nbsp;ಸಕ್ಕರೆ ಕಾರ್ಖಾನೆಯಲ್ಲಿ&nbsp;ಪೂಜೆ</p></div>

ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪೂಜೆ

   

ಸಂಕೇಶ್ವರ : ವಿವಿಧ ಕಾರಣಗಳಿಂದ ಹಿನ್ನಡೆ ಅನುಭವಿಸಿದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಪಟ್ಟಣದ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2025–26ನೇ ಸಾಲಿನ ಕಬ್ಬು ನುರಿಯುವ ಹಂಗಾಮು ಹಾಗೂ ಬಾಯ್ಲರ್ ಪ್ರದೀಪನ ಪೂಜೆ ನೆರವೇರಿಸಿ ಮಾತನಾಡಿದ ಅವರು,ಕಳೆದ ವರ್ಷ ಕೇವಲ 87 ದಿನಗಳ ಕಾಲ 5.5 ಲಕ್ಷ ಟನ್ ಕಬ್ಬು ನುರಿಸಿದ್ದ ಕಾರ್ಖಾನೆ, ಈ ಬಾರಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಅಧಿಕ ಉತ್ಪಾದನೆಗೆ ತಯಾರಿ ನಡೆಸಿದೆ. ಈ ಬಾರಿ ಸುಮಾರು 10,000 ಟನ್ ಕಬ್ಬು ಕ್ರಷಿಂಗ್, 1.5 ಲಕ್ಷ ಲೀಟರ್ ಇಥೆನಾಲ್ ಉತ್ಪಾದನೆ ಹಾಗೂ 18,000 ದಿಂದ 36,000 ಮೆಗಾವ್ಯಾಟ್ ಕೋಜನರೇಷನ್ ಗುರಿ ಇಡಲಾಗಿದೆ ಎಂದರು.

ADVERTISEMENT

ಈ ಗುರಿ ಸಾಧಿಸಲು 150 ದಿನಗಳವರೆಗೆ ನಿರಂತರ ಕಬ್ಬು ನುರಿಸುವ ಅಗತ್ಯವಿದೆ. ಈಗಾಗಲೇ ಪ್ರತಿ ಕೆ.ಜಿ.ಗೆ ₹ 17  ದರದಲ್ಲಿ 50 ಕೆ.ಜಿ. ಸಕ್ಕರೆಯನ್ನು ಸದಸ್ಯರಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು

ಶಾಸಕಿ ಶಶಿಕಲಾ ಜೊಲ್ಲೆ, ನಿಡಸೋಸಿ ಸಿದ್ಧಸಂಸ್ಥಾನ ಮಠದ ಡಾ. ಶಿವಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿದರು.

ಸಂಕೇಶ್ವರ ಶಂಕರಾಚಾರ್ಯರ ಮಠದ ಶ್ರೀ ಅಭಿನವ ವಿದ್ಯಾನರಸಿಂಹ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಕಾರಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಶಿವನಾಯಿಕ ನಾಯಿಕ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಸುರೇಂದ್ರ ದೊಡ್ಡಲಿಂಗನವರ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶಾರದಾ ಪಾಟೀಲ, ಭಾರತಿ ಹಂಜಿ, ಮುಖಂಡರಾದ ಶ್ರೀಕಾಂತ ಹತನೂರಿ, ಶಂಕರರಾವ ಹೆಗಡೆ ಕಾರಖಾನೆ ಜನರಲ್ ಮ್ಯಾನೇಜರ್ ವೀರನಗೌಡ ದೇಸಾಯಿ, ಆಡಳಿತ ಅಧಿಕಾರಿ ರವೀಂದ್ರ ಚೌಗಲಾ, ಕಾರ್ಮಿಕರ ಸಂಘಟನೆ ಅಧ್ಯಕ್ಷ ಮೋಹನ ಕೋಠಿವಾಲೆ ಇತರರು ಇದ್ದರು.

5 skv2ep ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2025–26ನೇ ಸಾಲಿನ ಕಬ್ಬು ನುರಿಯುವ ಹಂಗಾಮು ಹಾಗೂ ಬಾಯ್ಲರ್ ಪ್ರದೀಪನ  ಮಾಜಿ ಸಂಸದ ಸಂಸದ ಅಣ್ಣಾಸಾಹೇಬ ಜೊಲ್ಲೆ ೬೬ನೇಯ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.