ADVERTISEMENT

ಕಳ್ಳತನ ಆರೋಪಿ ಬಂಧನ: 101 ಮೊಬೈಲ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 14:46 IST
Last Updated 6 ಜೂನ್ 2025, 14:46 IST
ಪೊಟೊ- 6 skv1ep ಸಂಕೇಶ್ವರ ಪೋಲಿಸರು ತೆಲಂಗಾಣ ರಾಜ್ಯದ ವ್ಯಕ್ತಿಯಿಂದ ವಶ ಪಡೆದ 101 ಮೋಬೈಲಗಳು ಮತ್ತು ಕಾರು.
ಪೊಟೊ- 6 skv1ep ಸಂಕೇಶ್ವರ ಪೋಲಿಸರು ತೆಲಂಗಾಣ ರಾಜ್ಯದ ವ್ಯಕ್ತಿಯಿಂದ ವಶ ಪಡೆದ 101 ಮೋಬೈಲಗಳು ಮತ್ತು ಕಾರು.   

ಸಂಕೇಶ್ವರ: ಕಾರಿನಲ್ಲಿ ₹11.75 ಲಕ್ಷ ಮೌಲ್ಯದ 101 ಮೊಬೈಲ್‌ಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಂಕೇಶ್ವರ ಪೋಲಿಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ತೆಲಂಗಾಣ ರಾಜ್ಯದ ಬಾಣಸವಾಡಾ ಗ್ರಾಮದ ನವೀನ ಕೃಷ್ಣ ಸಂಪತ್  ಬಂಧಿತ ಆರೋಪಿ.

ಹಳೆ ಪಿ.ಬಿ.ರಸ್ತೆಯಲ್ಲಿ ಪೋಲಿಸರು ವಾಹನಗಳನ್ನು ತಪಾಸಣೆ ಮಾಡುವಾಗ ಹೋಂಡಾ ಕಾರನ್ನು ತಪಾಸಣೆ ಮಾಡಿದಾಗ ಅದರಲ್ಲಿ 12 ಕಂಪನಿಗಳ 101 ಮೊಬೈಲ್‌ಗ ಪತ್ತೆಯಾಗಿವೆ. ಇವುಗಳ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ. ಮೊಬೈಲ್‌ ₹3 ಲಕ್ಷ ಮೌಲ್ಯದ ಕಾರನ್ನು ಸಹಿತ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಎ.ಕೆ.ಸೊನ್ನದ, ಪೋಲಿಸ್ ಸಿಬ್ಬಂದಿಯಾದ ಎಸ್.ಎಲ್.ಗಳತಗಿ, ಎಸ್.ಎ.ಕಾಂಬಳೆ, ವಿ.ಬಿ.ಮುರಕಿಭಾವಿ, ಬಿ.ಟಿ.ಪಾಟೀಲ ಅವರುಗಳು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.