ADVERTISEMENT

ಬೆಳಗಾವಿ: ರಾಷ್ಟ್ರಮಟ್ಟದ ಮುಕ್ತ ಚೆಸ್‌ ಟೂರ್ನಿ 25ರಿಂದ

ಸತೀಶ ಜಾರಕಿಹೊಳಿ ಪೌಂಡೇಶನ್‌ ವತಿಯಿಂದ ₹4 ಲಕ್ಷ ನಗದು ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:00 IST
Last Updated 7 ಅಕ್ಟೋಬರ್ 2025, 2:00 IST
ರಾಹುಲ್‌ ಜಾರಕಿಹೊಳಿ ಜನ್ಮದಿನದ ಅಂಗವಾಗ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ಸೋಮವಾರ ಬೀದಿಬದಿ ವ್ಯಾಪಾರಸ್ಥರಿಗೆ ಛತ್ರಿಗಳನ್ನು ನೀಡಿದರು
ರಾಹುಲ್‌ ಜಾರಕಿಹೊಳಿ ಜನ್ಮದಿನದ ಅಂಗವಾಗ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ಸೋಮವಾರ ಬೀದಿಬದಿ ವ್ಯಾಪಾರಸ್ಥರಿಗೆ ಛತ್ರಿಗಳನ್ನು ನೀಡಿದರು   

ಬೆಳಗಾವಿ: ಸತೀಶ ಜಾರಕಿಹೊಳಿ ಪೌಂಡೇಶನ್‌ ವತಿಯಿಂದ ಇಲ್ಲಿನ ಗೋವಾವೆಸ್‌ ಮಹಾವೀರ ಭವನದಲ್ಲಿ ಅ.25 ಮತ್ತು 26ರಂದು ‘ಸತೀಶ ಜಾರಕಿಹೊಳಿ ಓಪನ್‌ ಚೆಸ್‌ ಟೂರ್ನಮೆಂಟ್‌’ ಆಯೋಜಿಸಲಾಗಿದೆ. ರಾಷ್ಟ್ರಮಟ್ಟದ ಟೂರ್ನಿಯಲ್ಲಿ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಲಿದ್ದಾರೆ’ ಎಂದು ಸತೀಶ ‍ಫ್ಯಾನ್ಸ್‌ ಕ್ಲಬ್‌ ಅಧ್ಯಕ್ಷ ಇಮ್ರಾನ್‌ ತಪ್ಪಕೀರ ಹೇಳಿದರು.

ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಮೂರು ವರ್ಷಗಳಿಂದ ಈ ಟೂರ್ನಮೆಂಟ್‌ ಹಮ್ಮಿಕೊಳ್ಳಲಾಗುತ್ತಿದೆ. ಸ್ಪರ್ಧಾಳುಗಳಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಗೋವಾ ವಿವಿಧ ರಾಜ್ಯಗಳಿಂದ ಚಾಂಪಿಯನ್‌ ಸ್ಪರ್ಧಾಳುಗಳು ಆಗಮಿಸಲಿದ್ದಾರೆ. ₹1,000 ಪ್ರವೇಶ ಶುಲ್ಕವಿದೆ. 16 ವರ್ಷದೊಳಗಿನವರಿಗೆ ₹800 ಶುಲ್ಕವಿದೆ’ ಎಂದರು.

‘ಸಂಸದೆ ಪ್ರಿಯಂಕಾ ಜಾರಕಿಹೊಳಿ, ವೈದ್ಯ ಡಾ.ಗಿರೀಶ ಸೋನವಾಲ್ಕರ್, ಯುವ ನಾಯಕ ರಾಹುಲ್‌ ಜಾರಕಿಹೊಳಿ ಕ್ರೀಡೆಗೆ ಚಾಲನೆ ನೀಡುವರು. ‌ಸುಸಜ್ಜಿತವಾದ ವ್ಯವಸ್ಥೆ ಕಲ್ಪಿಸಲು ಸಚಿವ ಸತೀಶ ಜಾರಕಿಹೊಳಿ ಸೂಚಿಸಿದ್ದಾರೆ. ಈ ಭಾಗದ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಉದ್ದೇಶದಿಂದ ಈ ಕ್ರೀಡೆಯನ್ನು ಆಯೋಜಿಸುತ್ತಿದೆ’ ಎಂದರು.

ADVERTISEMENT

‘ಈ ಬಾರಿ ಅಂದಾಜು ₹4 ಲಕ್ಷ ನಗದು ಬಹುಮಾನ ನೀಡಲಾಗುವುದು. ಮೊದಲ ಬಹುಮಾನ ₹1 ಲಕ್ಷ, ಎರಡನೇ ಬಹುಮಾನ ₹50 ಸಾವಿರ, ಮೂರನೇ ಬಹುಮಾನ ₹25 ಸಾವಿರ, ಎಲ್ಲದಕ್ಕೂ ಟ್ರೋಫಿ ನೀಡಲಾಗುವುದು. ಉಳಿದ ಸ್ಪರ್ಧಾಳುಗಳಿಗೆ ಸಮಾನಾಧಕರ ಬಹುಮಾನ ನೀಡಲಾಗುವುದು’ ಎಂದು ಹೇಳಿದರು.

ದೀಕ್ಷಾ ಪೂಜಾರಿ, ನೀಲೇಶ ಭಂಡಾರಿ, ಜಾಹೀದ್‌ ವಂಟಮೂರಿ, ವಿಕ್ಕಿ ಸಿಂಗ್‌, ದಿಲಾವರ್‌ ಪಂಡಾರಿ, ಖಾದೀರ್‌ ಶೇಖ , ಆಕಾಶ ಮಡಿವಾಳ ಇದ್ದರು.

ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ

ಬೆಳಗಾವಿ: ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ 26ನೇ ಜನ್ಮದಿನದ ಅಂಗವಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬೀದಿಬದಿ ವ್ಯಾಪಾರಸ್ಥರಿಗೆ ನೆರಳು ನೀಡುವ ಛತ್ರಿಗಳನ್ನು ಸೋಮವಾರ ವಿತರಿಸಿದರು. ‘ಜಿಲ್ಲೆಯಲ್ಲಿ 2000 ಛತ್ರಿ ಕೋಡಲಾಗುತ್ತಿದೆ. ನಗರಕ್ಕೆ 800 ಛತ್ರಿ ಕೋಡಲಾಗಿದೆ. ಗೋಕಾಕ ಸಂಕೇಶ್ವರ ಹುಕ್ಕೇರಿ ನಿಪ್ಪಾಣಿ ರಾಯಬಾಗ ಹಾರೂಗೇರಿ ಕಡೆಗಳಲ್ಲಿ ಸುಮಾರು ಛತ್ರಿಗಳನ್ನು ನೀಡಲಾಗಿದೆ’ ಎಂದು ಸಚಿವ ಸತೀಶ ಇದೇ ವೇಳೆ ತಿಳಿಸಿದರು. ಈ ವೇಳೆ ವ್ಯಾಪಾರಸ್ಥರು ಸಚಿವರಿಗೆ ಕಂಬಳಿ ಹೊದಿಸಿ ಸನ್ಮಾನಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ. ಕೆಪಿಸಿಸಿ ಸದಸ್ಯರಾದ ಮಲಗೌಡ ಪಾಟೀಲ ಸತೀಶ ಜಾರಕಿಹೊಳಿ ಫೌಂಡೇಶನ್ ಮುಖ್ಯಸ್ಥ ಜುಬೇರ್‌ ಮಿರ್ಜಾಬಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.