ADVERTISEMENT

ಹುಕ್ಕೇರಿ | ಸಮಸ್ಯೆ ಆಲಿಸಿದ ಸಚಿವ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 1:57 IST
Last Updated 29 ಆಗಸ್ಟ್ 2025, 1:57 IST
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದಾಗ ಜನರ ಕುಂದು ಕೊರತೆ ಆಲಿಸಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದಾಗ ಜನರ ಕುಂದು ಕೊರತೆ ಆಲಿಸಿದರು.   

ಹುಕ್ಕೇರಿ: ಸ್ಥಳೀಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಇದಕ್ಕೂ ಮೊದಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಿಬ್ಬಂದಿ ಜತೆ ಗುಪ್ತ ಸಭೆ ನಡೆಸಿ ಚರ್ಚಿಸಿದರು. ನಂತರ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರ ವಿವಿಧ ಸಮಸ್ಯೆ ಆಲಿಸಿ ಸಂಬಂಧಿತ ಅಧಿಕಾರಿಗಳಿಗೆ ಸಮಸ್ಯೆ ಬೇಗನೆ ಬಗೆ ಹರಿಸುವಂತೆ ಸೂಚಿಸಿದರು.

ಸಂಘದ ಆಡಳಿತ ಮಂಡಳಿಯ ಜತೆ ಆಡಳಿತಾತ್ಮಕ ಚರ್ಚೆ ನಡೆಸಿದ ಸಚಿವರು, ಜನರು ವಿದ್ಯುತ್ ಸಮಸ್ಯೆ ಎಂದು ಹೇಳಿಕೊಂಡು ಬಂದಾಗ ತಕ್ಷಣ ಅವರಿಗೆ ಸ್ಪಂದಿಸಿ ಸಮಸ್ಯೆ ಬಗೆ ಹರಿಸಲು ಸಲಹೆ ನೀಡಿದರು. ಎಂ.ಡಿ. ರವೀಂದ್ರ ಪಾಟೀಲ್ ಪೂರಕ ಮಾಹಿತಿ ನೀಡಿದರು.

ADVERTISEMENT

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಸಂಘದ ಅಧ್ಯಕ್ಷ ಜಯಗೌಡ ಪಾಟೀಲ್, ಉಪಾಧ್ಯಕ್ಷ ವಿಷ್ಣು ರೇಡೆಕರ್, ನಿರ್ದೇಶಕರಾದ ರವೀಂದ್ರ ಹಿಡಕಲ್, ಶಶಿರಾಜ ಪಾಟೀಲ್, ಬಸಗೌಡ ಮಗೆನ್ನವರ, ಕುನಾಲ ಪಾಟೀಲ್, ಅಶೋಕ ಚಂದಪ್ಪಗೋಳ, ಜೋಮಲಿಂಗ ಪಟೋಳಿ, ರವೀಂದ್ರ ಅಸೋದೆ, ಈರಪ್ಪ ಬಂಜಿರಾಮ್, ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ್, ಆರ್.ಇ.ನೇಮಿನಾಥ ಖೆಮಲಾಪುರೆ, ಹಿರಾ ಶುಗರ್ಸ್ ಅಧ್ಯಕ್ಷ ರಾಜು ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕ ಬಸವರಾಜ ಮರಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದು ಪಾಟೀಲ್, ಗ್ಯಾರಂಟಿ ಅನುಷ್ಟಾನ ಅಧ್ಯಕ್ಷ ಶಾನೂಲ್ ತಹಸೀಲ್ದಾರ್, ಪುರಸಭೆ ಅಧ್ಯಕ್ಷ ಇಮ್ರಾನ್ ಮೊಮೀನ್, ಸದಸ್ಯರಾದ ಪಾರ್ವತಿ ಲಟ್ಟಿ, ಸುರೇಖಾ ಗಳತಗಿಮಠ, ಮುಖಂಡೆ ಸುಜಾತಾ ಪಾಟೀಲ್, ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಬಸಗೌಡ ಪಾಟೀಲ್, ಮಾಜಿ ಅಧ್ಯಕ್ಷ ರವಿ ಕರಾಳೆ, ಮುಖಂಡರಾದ ಮೌನೇಶ್ ಪೋತದಾರ್, ಮಂಜುನಾಥ ಪಾಟೀಲ್, ಬಸವರಾಜ ನಾಯಿಕ, ವೀರಣ್ಣ ಬಿಸಿರೊಟ್ಟಿ, ಕಿರಣಸಿಂಗ್ ರಜಪೂತ್, ರಾಜು ಸಿದ್ನಾಳ, ಹಿರಿಯ ವಕೀಲ ಭೀಮಸೇನ್ ಬಾಗಿ, ಚಂದು ಗಂಗನ್ನವರ, ಕಬೀರ್ ಮಲಿಕ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಇದ್ದರು.

ಕುತುಹಲ: ಜಿಲ್ಲಾ ಉಸ್ತುವಾರಿ ಸಚಿವರು ಪದೇ ಪದೇ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭೇಟಿ ನೀಡುತ್ತಿರುವುದು ಸಾರ್ವಜನಿಕರಲ್ಲಿ ಕುತುಹಲ ಮೂಡಿಸುತ್ತಿದೆ.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದಾಗ ಜನರ ಕುಂದು ಕೊರತೆ ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.