ADVERTISEMENT

ಖಾನಾಪುರ: ಭತ್ತದ ಬೀಜ ವಿತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಮೇ 2022, 3:57 IST
Last Updated 28 ಮೇ 2022, 3:57 IST
ಖಾನಾಪುರ ತಾಲ್ಲೂಕು ನಿಟ್ಟೂರಿನ ಪಿಕೆಪಿಎಸ್ ವತಿಯಿಂದ ನಿಟ್ಟೂರು ಹಾಗೂ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು
ಖಾನಾಪುರ ತಾಲ್ಲೂಕು ನಿಟ್ಟೂರಿನ ಪಿಕೆಪಿಎಸ್ ವತಿಯಿಂದ ನಿಟ್ಟೂರು ಹಾಗೂ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು   

ಖಾನಾಪುರ: ತಾಲ್ಲೂಕಿನ ನಿಟ್ಟೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಪ್ರಮಾಣೀಕೃತ ಭತ್ತದ ಬೀಜ ವಿತರಣೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಸಂಘದ ಅಧ್ಯಕ್ಷ ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಸುರೇಶ ದೇಸಾಯಿ ರೈತರಿಗೆ ಬೀಜ ವಿತರಿಸಿ ಮಾತನಾಡಿ, ರೈತರು ಕಳಪೆ ಬೀಜಗಳನ್ನು ಖರೀದಿಸಿ ಮೋಸ ಹೋಗಬಾರದು. ಭತ್ತದ ಬೀಜ ಖರೀದಿಸಿದ ಬಳಿಕ ರಸೀದಿ ಪಡೆದು ಕಾಯ್ದಿಟ್ಟುಕೊಳ್ಳಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆಯಬೇಕು ಎಂದರು. ಲಕ್ಷ್ಮಣ ನಾಯ್ಕ, ಸಾಗರ ನಾರ್ವೇಕರ, ನಾಮದೇವ ಸುಳೇಬಾವಿ, ಗುಂಡು ಚೌಗುಲೆ, ದಾಮೋದರ ಕುಸಮಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT