ಬೆಳಗಾವಿ: ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರು ಹಾಗೂ ವಿಡಿಯೊಗ್ರಾಫರ್‌ಗಳ ಸಂಘದ ನೂತನ ಪದಾಧಿಕಾರಿಗಳನ್ನು ಇಲ್ಲಿನ ವಾರ್ತಾ ಭವನದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ನೂತನ ಅದ್ಯಕ್ಷರಾಗಿ ಸದಾಶಿವ ಸಂಕಪ್ಪಗೋಳ, ಉಪಾಧ್ಯಕ್ಷರಾಗಿ ಏಕನಾಥ ಅಗಸಿಮನಿ, ಕಾರ್ಯದರ್ಶಿಯಾಗಿ ವಿಜಯ ಮೋಹಿತೆ, ಖಜಾಂಚಿಯಾಗಿ ಡಿ.ಬಿ. ಪಾಟೀಲ, ಸಲಹಾ ಸದಸ್ಯರಾಗಿ ಸುನೀಲ ಗಾವಡೆ, ವಸಂತ ಕೋಲಕಾರ, ಪಿ.ಕೆ. ಬಡಿಗೇರ, ಅಮೃತ ಬಿರ್ಜೆ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಈಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಮಾಜಿ ಶಾಸಕ ಬಿ.ಐ. ಪಾಟೀಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪತ್ರಿಕಾ ಛಾಯಾಗ್ರಾಹಕರು ಹಾಗೂ ವಾಹಿನಿಗಳ ವಿಡಿಯೊಗ್ರಾಫರ್‌ಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.