ಬೆಳಗಾವಿ: ಕಳೆದ 5 ತಿಂಗಳಿನಿಂದ ಬಾರದ ವೃದ್ಧಾಪ್ಯ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ತಾಲ್ಲೂಕಿನ ಅಗಸಗಾ ಹಾಗೂ ಚಲವೇನಟ್ಟಿ ಗ್ರಾಮಸ್ಥರು ಸೋಮವಾರ ಒತ್ತಾಯಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ‘ಕಳೆದ 5 ತಿಂಗಳಿನಿಂದ ಪಿಂಚಣಿ ಬಂದಿಲ್ಲ. ನಾವೆಲ್ಲರೂ ಬಡಕುಟುಂಬದವರಾಗಿದ್ದು, ಪಿಂಚಣಿಯೇ ನಮಗೆ ಆಧಾರವಾಗಿದೆ. ಕೂಡಲೇ ಇದನ್ನು ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಕಲಗೌಡ ಪಾಟೀಲ ಇದರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.