ADVERTISEMENT

ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆ: ಮಹಾದೇವಪ್ಪ ಯಾದವಾಡ ಬಣಕ್ಕೆ ಜಯ

ಶ್ರೀ ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:10 IST
Last Updated 16 ಸೆಪ್ಟೆಂಬರ್ 2025, 2:10 IST
ರಾಮದುರ್ಗ ತಾಲ್ಲೂಕಿನ ಖಾನಪೇಟೆಯ ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ ಬಹುಮತ ಪಡೆದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮನೆಯ ಮುಂಭಾಗದಲ್ಲಿ ಮಧ್ಯರಾತ್ರಿಯೇ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು 
ರಾಮದುರ್ಗ ತಾಲ್ಲೂಕಿನ ಖಾನಪೇಟೆಯ ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ ಬಹುಮತ ಪಡೆದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮನೆಯ ಮುಂಭಾಗದಲ್ಲಿ ಮಧ್ಯರಾತ್ರಿಯೇ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು    

ರಾಮದುರ್ಗ: ಕುತೂಹಲ ಕೆರಳಿಸಿದ್ದ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ನೇತೃತ್ವದ ಬಣ ಸತತ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ. 

ಭಾನುವಾರ ತಡರಾತ್ರಿವರೆಗೂ ಮತಎಣಿಕೆ ನಡೆಯಿತು. ಕಾರ್ಖಾನೆಯ 18 ಸ್ಥಾನಗಳಲ್ಲಿ ಮಹಾದೇವಪ್ಪ ಯಾದವಾಡ ನೇತೃತ್ವದ ಬಣ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಪ್ರತಿಸ್ಪರ್ಧಿ ಬಿ.ಬಿ.ಹಿರೇರಡ್ಡಿ ರೈತ ಸಹಕಾರಿ ಬಣ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. 

ಕಳೆದ ಅವಧಿಯಲ್ಲಿ ನಿರ್ದೇಶಕರಾಗಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಅಧ್ಯಕ್ಷ ಮಲ್ಲಣ್ಣ ಯಾದವಾಡ, ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ಈರಪ್ಪ ಹರನಟ್ಟಿ, ಬಸವರಾಜ ತುಪ್ಪದ, ಮಹಾದೇವ ಆತಾರ, ಶಶಿಕಲಾ ಸೋಮಗೊಂಡ, ಅನ್ನಪೂರ್ಣಾ ಪಾಟೀಲ, ಚಂದ್ರು ರಜಪೂತ, ಪುನರಾಯ್ಕೆಯಾದರು.

ADVERTISEMENT

ಭೀಮಪ್ಪ ಬೆಳವಣಕಿ, ಶಿವಾನಂದ ಮುಷ್ಠಿಗೇರಿ (ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಪೆನೆಲ್), ಬಸವರಾಜ ಹಿರೇರಡ್ಡಿ ಗೋಪಾಲರಡ್ಡಿ ಸಂಶಿ, ಪರುತಗೌಡ ಪಾಟೀಲ, ಪರಪ್ಪಗೌಡ ಪಾಟೀಲ, ಈರಣ್ಣ ಕಾಮನ್ನವರ, ಭೀಮಪ್ಪ ಬಸಿಡೋಣಿ, ಬಸಪ್ಪ ಸಿದರಡ್ಡಿ (ಬಿ.ಬಿ.ಹಿರೇರಡ್ಡಿ ಪೆನೆಲ್‌) ಆಯ್ಕೆಯಾದರು.

ಕಳೆದ ಅವಧಿಯಲ್ಲಿ ನಿರ್ದೇಶಕರಾಗಿದ್ದ ಅಡಿವೆಪ್ಪ ಸುರಗ, ಶಂಕರಗೌಡ ಪಾಟೀಲ, ಶ್ರೀನಿವಾಸ ಕರದಿನ, ದುಂಡಪ್ಪ ದೇವರಡ್ಡಿ ಮತ್ತು ಬಾಳಪ್ಪ ಹಂಜಿ ಈ ಚುನಾವಣೆಯಲ್ಲಿ ಪರಾಭವಗೊಂಡರು.

ಮಧ್ಯರಾತ್ರಿಯೇ ಅಭಿಮಾನಿಗಳು ತಮ್ಮ ನಾಯಕರರೊಂದಿಗೆ ವಿಜಯೋತ್ಸವ ಆಚರಿಸಿದರು. ಪಟ್ಟಣದ ಕ್ರಾಸ್‌ಗಳಲ್ಲಿ ಪಟಾಕಿ ಸಿಡಿಸಿ ಸಂತಸಪಟ್ಟರು.

ಚುನಾವಣಾಧಿಕಾರಿಯಾಗಿ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ್‌ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಕಾರ್ಯ ನಿರ್ವಹಿಸಿದ್ದರು. ಡಿಎಸ್‌ಪಿ ಚಿದಂಬರ ಮಡಿವಾಳರ, ಸಿಪಿಐ ವಿನಾಯಕ ಬಡಿಗೇರ ಸೂಕ್ತ ಪೊಲೀಸ್‌ ಬಂದೋಬಸ್ತ್‌ ನೆರವೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.