ADVERTISEMENT

‘ಸಿದ್ಧರಾಮಯ್ಯನವರೇ ರಾಜೀನಾಮೆ ನೀಡಿರಿ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:35 IST
Last Updated 24 ಸೆಪ್ಟೆಂಬರ್ 2024, 14:35 IST
ಎಫ್.ಎಸ್.ಸಿದ್ದನಗೌಡರ
ಎಫ್.ಎಸ್.ಸಿದ್ದನಗೌಡರ   

ಪ್ರಜಾವಾಣಿ ವಾರ್ತೆ

ಬೈಲಹೊಂಗಲ: 'ನಾನು ತಪ್ಪೆ ಮಾಡಿಲ್ಲ. ರಾಜ್ಯಪಾಲರು ಮನಸೋ ಇಚ್ಚೆ ಕಾರ್ಯನಿರ್ವಹಿಸುತಿದ್ದಾರೆ ಎಂದು ಆಪಾದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಪ್ರಕರಣ ವಜಾಗೊಳಿಸಿ 17ಎಪಿಸಿ ಆ್ಯಕ್ಟ್ ಪ್ರಕಾರ ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿರುವದು ಕಾನೂನಿಗೆ ಸಂದ ಜಯವಾಗಿದೆ. ತಕ್ಷಣ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು' ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ್ದನಗೌಡರ ಆಗ್ರಹಿಸಿದ್ದಾರೆ.

‘ಮುಖ್ಯಮಂತ್ರಿಯವರಿಗೆ ರಾಜೀನಾಮೆ ಕೊಡುವುದೊಂದೇ ದಾರಿ. ಘನವೆತ್ತ ರಾಜ್ಯಪಾಲರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ನ್ಯಾಯಾಲಯವೆ ಸುದೀರ್ಘ ವಾದ, ವಿವಾದ ಆಲಿಸಿ ಈಗ ತೀರ್ಪು ಪ್ರಕಟಿಸಿದೆ. ಈ‌ ಮಣ್ಣಿನ ಕಾನೂನನ್ನು ಪರಿಪಾಲಿಸುವ ಹಾಗೂ ಸಂವಿಧಾನ ರಕ್ಷಣೆಗೆ ಬದ್ದ ಎನ್ನುವ ಭಂಡತನ ತೋರಿಸುವ ಸಿದ್ದರಾಮಯ್ಯನವರೆ ಮೊದಲು ರಾಜಿನಾಮೆ ಸಲ್ಲಿಸಿ’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.