ADVERTISEMENT

ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಪ್ರಬಂಧಕ್ಕೆ ಬೆಳ್ಳಿ ಪದಕ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 11:12 IST
Last Updated 22 ಅಕ್ಟೋಬರ್ 2020, 11:12 IST

ಬೆಳಗಾವಿ:ಇಲ್ಲಿನ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಮಂಡಿಸಿದ್ದ ‘ಸಕ್ಕರೆ ಕಾರ್ಖಾನೆಯ ಕಬ್ಬಿನ ರಸ ಕುದಿಸಲು ಬಳಸಲಾಗುವ ಕೊಳವೆಯ ಸಾಮರ್ಥ್ಯ ಸುಧಾರಣೆ’ ಕುರಿತು ಮಂಡಿಸಿದ್ದ ಪ್ರಬಂಧಕ್ಕೆ ಬೆಳ್ಳಿ ಪದಕ ಪಡೆದಿದೆ.

ನವದೆಹಲಿಯ ಅಖಿಲ ಭಾರತ ಸಕ್ಕರೆ ತಂತ್ರಜ್ಞ ಸಂಘದಿಂದ ಕೋಲ್ಕತ್ತಾದಲ್ಲಿ ಈಚೆಗೆ ಆಯೋಜಿಸಿದ್ದ 77ನೇ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಾಗಿತ್ತು.

ಅಖಿಲ ಭಾರತ ಸಕ್ಕರೆ ತಂತ್ರಜ್ಞ ಸಂಘದಿಂದ ಅ.20ರಿಂದ ಅ.21ರವರೆಗೆ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಪದಕ ಪ್ರದಾನ ಮಾಡಲಾಯಿತು. ಪ್ರಬಂಧವನ್ನು ಸಂಸ್ಥೆಯ ಹಿರಿಯ ಸಲಹೆಗಾರ ಡಾ,ಎಂ.ಬಿ. ಲೋಂಡೆ, ನಿರ್ದೇಶಕ ಡಾ.ಆರ್.ಬಿ. ಖಾಂಡಗಾವೆ ಹಾಗೂ ಸಕ್ಕರೆ ಎಂಜಿನಿಯರ್ ಎ. ಗುರುನಾಥ ಬರೆದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸಂಸ್ಥೆಗೆ ಬೆಳ್ಳಿ ಪದಕದ ಪ್ರಶಸ್ತಿಯು ಪ್ರಥಮ ಬಾರಿಗೆ ದೊರೆದಿದೆ. ಸಂಸ್ಥೆಯು ಕಬ್ಬಿನ ಹೊಸ ತಳಿಗಳ ಆಯ್ಕೆಯ ಕೇಂದ್ರ ಹಾಗೂ ಸಕ್ಕರೆ ಉದ್ದಿಮೆಗೆ ಸಂಬಂಧಪಟ್ಟ ಪದಾರ್ಥಗಳನ್ನು ವಿಶ್ಲೇಷಿಸಲು ಅಧಿಕೃತ ಪ್ರಯೋಗಾಲಯ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.