ADVERTISEMENT

ಚಪ್ಪಲಿ ಧರಿಸದೆ ಕ್ಷೇತ್ರದ ಜನರಿಗಾಗಿ ಅಂಜಲಿ ವ್ರತ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 15:47 IST
Last Updated 19 ಅಕ್ಟೋಬರ್ 2020, 15:47 IST
ಡಾ.ಅಂಜಲಿ ನಿಂಬಾಳ್ಕರ್
ಡಾ.ಅಂಜಲಿ ನಿಂಬಾಳ್ಕರ್   

ಬೆಳಗಾವಿ: ‘ನವರಾತ್ರಿ ಅಂಗವಾಗಿ ಜೀವನದಲ್ಲಿ ಇದೇ ಮೊದಲಿಗೆ ವ್ರತ ಅಚರಿಸುತ್ತಿದ್ದೇನೆ. 9 ದಿನಗಳವರೆಗೆ ಕಾಲ ಚಪ್ಪಲಿ ಹಾಕುವುದಿಲ್ಲ ಹಾಗೂ ಹಾಲು ಮತ್ತು ಹಣ್ಣನ್ನು ಮಾತ್ರ ಸೇವಿಸುತ್ತೇನೆ’ ಎಂದು ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ತಿಳಿಸಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸೋಮವಾರ ಬರಿಗಾಲಲ್ಲಿ ಬಂದಿದ್ದ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ನನ್ನ ಕೈಯಿಂದ ಆಗುವಷ್ಟು ಕೆಲಸ ಮಾಡುತ್ತೇನೆ. ಉಳಿದದ್ದನ್ನು ದೇವರಿಗೆ ಬಿಡುತ್ತೇನೆ. ಕ್ಷೇತ್ರದ ಜನರಿಗೆ ಒಳಿತಾಗಲೆಂದು ಪ್ರಾರ್ಥಿಸಿ ತಿರುಪತಿಗೆ ಪಾದಯಾತ್ರೆ ಕೈಗೊಂಡಿದ್ದೆ. ಈಗ ನವರಾತ್ರಿ ಸಂದರ್ಭದಲ್ಲಿ ಕೂಡ, ಕ್ಷೇತ್ರದ ಹಲವು ವಿಷಯಗಳನ್ನು ಈಡೇರಿಸುವ ಬಗ್ಗೆ ದೇವಿಗೆ ವ್ರತದ ಮೂಲಕ ಒತ್ತಾಯ ಮಾಡುತ್ತಿದ್ದೇನೆ. ಎಲ್ಲವೂ ದೇವಿಗೆ ಗೊತ್ತಿದೆ. ಎಲ್ಲವನ್ನೂ ನೋಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.