ADVERTISEMENT

ಬೀದಿ ನಾಯಿಗಳನ್ನು ಹಿಡಿಯಲು 3 ವರ್ಷದಲ್ಲಿ ₹ 47 ಲಕ್ಷ ವೆಚ್ಚ!

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 7:02 IST
Last Updated 9 ಜೂನ್ 2021, 7:02 IST

ಬೆಳಗಾವಿ: ಇಲ್ಲಿನ ನಗರಪಾಲಿಕೆಯು2014-15, 2017-18 ಹಾಗೂ 2019-20ನೇ ಸಾಲಿನಲ್ಲಿ ಬೀದಿನಾಯಿಗಳನ್ನು ಹಿಡಿಯಲು ಬರೋಬ್ಬರಿ ₹ 47 ಲಕ್ಷ ವೆಚ್ಚ ಮಾಡಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ದಾಖಲೆಗಳಿಂದ ಈ ವಿಷಯ ಬಹಿರಂಗಗೊಂಡಿದೆ.

ನಗರಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಇಷ್ಟು ಹಣ ವೆಚ್ಚ ಮಾಡಲಾಗಿದೆ. 2014–15ರಲ್ಲಿ 3,944 ನಾಯಿಗಳನ್ನು ಹಿಡಿಯಲಾಗಿದೆ. ಆಗ, ₹ 25,65,805 ವ್ಯಯಿಸಲಾಗಿದೆ.

ADVERTISEMENT

2017-18ರಲ್ಲಿ 972 ನಾಯಿಗಳನ್ನು ಹಿಡಿಯಲು ₹ 6,97,220 ಮತ್ತು 2019-20ರಲ್ಲಿ 1,598 ನಾಯಿಗಳನ್ನು ಹಿಡಿಯಲು ₹ 14,95,531 ವೆಚ್ಚ ಮಾಡಲಾಗಿದೆ. ಈ ವೆಚ್ಚವನ್ನು ತಾಳೆ ಹಾಕಿದರೆ ಪ್ರತಿ ನಾಯಿ ಹಿಡಿದು ಸಾಗಿಸಲು ಸರಾಸರಿ ₹ 730 ವೆಚ್ಚವಾಗಿದೆ ಎನ್ನುವುದು ತಿಳಿದುಬಂದಿದೆ ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ.

ಮಹಾನಗರಪಾಲಿಕೆ ಆರೋಗ್ಯಾಧಿಕಾರಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಮತ್ತು ಸಿಬ್ಬಂದಿಯನ್ನು ಈ ಕಾರ್ಯಕ್ಕೆ ಬಳಸಲಾಗಿತ್ತು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು, ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ, ನಾಯಿಗಳ ಉಟಪಳ ನಿವಾರಣೆಯಾಗಿಲ್ಲ. ಶಾಹೂನಗರ, ಅಜಂನಗರ, ನೆಹರೂ ನಗರ, ಸದಾಶಿವನಗರ ಸೇರಿದಂತೆ ನಗರದ ಬಹತೇಕ ಕಡೆಗಳಲ್ಲಿ ಬೀದಿನಾಯಿಗಳ ಹಿಂಡು ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.