ADVERTISEMENT

ರೈಲು ನಿಲ್ದಾಣ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 14:43 IST
Last Updated 22 ಅಕ್ಟೋಬರ್ 2020, 14:43 IST
ಬೆಳಗಾವಿಯ ರೈಲು ನಿಲ್ದಾಣದಲ್ಲಿ  ಅಭಿವೃದ್ಧಿ ಕಾಮಗಾರಿಗಳನ್ನು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್ ಹಾಗೂ ಅಧಿಕಾರಿಗಳು ಗುರುವಾರ ಪರಿಶೀಲಿಸಿದರು
ಬೆಳಗಾವಿಯ ರೈಲು ನಿಲ್ದಾಣದಲ್ಲಿ  ಅಭಿವೃದ್ಧಿ ಕಾಮಗಾರಿಗಳನ್ನು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್ ಹಾಗೂ ಅಧಿಕಾರಿಗಳು ಗುರುವಾರ ಪರಿಶೀಲಿಸಿದರು   

ಬೆಳಗಾವಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್ ಹಾಗೂ ಅಧಿಕಾರಿಗಳು ಗುರುವಾರ ಪರಿಶೀಲಿಸಿದರು.

ರೈಲು ನಿಲ್ದಾಣದ ಕಟ್ಟಡ ಹಾಗೂ ಕೋಚಿಂಗ್‌ ಟರ್ಮಿನಲ್‌ ವ್ಯವಸ್ಥೆಯ ಕಾಮಗಾರಿಯನ್ನು ವೀಕ್ಷಿಸಿದರು.

‘ರೈಲು ವಿಕಾಸ ನಿಗಮದಿಂದ ಕೈಗೊಂಡಿರುವ ಕಾಮಗಾರಿಗಳಿಗೆಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಅಡ್ಡಿಯಾಗಿತ್ತು. ಈಗ ಪ್ರಗತಿಯಲ್ಲಿವೆ. ವಿಳಂಬವಾದ್ದರಿಂದ, ಈ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು 2020ರ ಮಾರ್ಚ್‌ ಹೋಗಿದೆ. ಹೊಸ ನಿಲ್ದಾಣದೊಂದಿಗೆ ಮುಖ್ಯ ದ್ವಾರ, 2ನೇ ಪ್ರವೇಶ ದ್ವಾರ ನಿರ್ಮಸಲಾಗುವುದು. ಕೋಚಿಂಗ್ ಡಿಪೊ ಕೂಡ ಬರುವುದರಿಂದ ಇಲ್ಲಿಂದ ಹೆಚ್ಚಿನ ರೈಲುಗಳು ಹೊರಡುವುದಕ್ಕೆ ಅವಕಾಶವಾಗಲಿದೆ. ಇಲ್ಲಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೆ, ರೈಲುಗಳ ನಿರ್ವಹಣೆಗಾಗಿ ಬೇರೆ ನಗರಗಳ ಮೇಲಿನ ಅವಲಂಬನೆ ತಪ್ಪಲಿದೆ’ ಎಂದು ಸಿಂಗ್ ತಿಳಿಸಿದರು.

ADVERTISEMENT

‘ಲೋಂಡಾ–ಮೀರಜ್‌ ಜೋಡಿ ರೈಲು ಮಾರ್ಗ ನಿರ್ಮಾಣ ಕಾರ್ಯವನ್ನು ₹ 175 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಡಿಆರ್‌ಎಂ ಅರವಿಂದ ಮಾಳಖೇಡ, ರೈಲು ವಿಕಾಸ ನಿಗಮದ ಎಜಿಎಂ ಟಿ.ವಿ. ಭೂಷಣ್ ಮತ್ತು ಶಾಖಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.