ADVERTISEMENT

ಚನ್ನಮ್ಮನ ಕಿತ್ತೂರು: ಕುಬ್ಜ ವ್ಯಕ್ತಿಯ ಅಳಲು ಆಲಿಸಿದ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:11 IST
Last Updated 23 ಜುಲೈ 2025, 2:11 IST
ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ಕಲಗೌಡ ಪಾಟೀಲ ಅವರು ಕುಬ್ಜ ವ್ಯಕ್ತಿಯ ಅಹವಾಲು ಆಲಿಸಿದರು
ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ಕಲಗೌಡ ಪಾಟೀಲ ಅವರು ಕುಬ್ಜ ವ್ಯಕ್ತಿಯ ಅಹವಾಲು ಆಲಿಸಿದರು   

ಚನ್ನಮ್ಮನ ಕಿತ್ತೂರು: ಕುಬ್ಜ ದೇಹ ಹೊತ್ತುಕೊಂಡು ಇಲ್ಲಿನ ತಹಶೀಲ್ದಾರ್ ಕಚೇರಿಯ ಮೊದಲ ಮಹಡಿ ಏರಿ ಬಂದಿದ್ದ ಅಂಗವಿಕಲ ವ್ಯಕ್ತಿಯೊಬ್ಬನ ಅಳಲು ಆಲಿಸಲು ಬಾಗಿಲ ಬಳಿ ಬಂದ ತಹಶೀಲ್ದಾರ್ ಕಲಗೌಡ ಪಾಟೀಲ ಅವರು ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನ ಗುಡಿ ಕೊಟಬಾಗಿಯ ಸಿದ್ದಪ್ಪ ಹದ್ದನವರ ತನ್ನ ಜನನ ಪ್ರಮಾಣ ಪತ್ರದಲ್ಲಿಯ ದೋಷ ತಿದ್ದುಪಡಿಗೆ ಈಚೆಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದರು. ಇದನ್ನು ಗಮನಿಸಿದ ಅವರು ಆತನ ಬಳಿ ಬಂದು ಕಚೇರಿಗೆ ಆಗಮಿಸಿರುವ ವಿಷಯ ಕೇಳಿದರು.

ಆತನ ಬಳಿಯೇ ಕುಳಿತು ಅಳಲು ಆಲಿಸಿ ಮಾರ್ಗದರ್ಶನ ನೀಡಿ ಕಳಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.