ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲ್ಲಾಪುರ ಕೆಎ ಗ್ರಾಮದ 9 ವರ್ಷದ ಸಚಿನ್ ಗಂಗಪ್ಪ ಯರಗುದ್ದಿ ದೇಶದ ಸೈನಿಕರ ನಿಧಿಗೆ ₹5,151 ನೀಡಿದ್ದಾನೆ.
‘ವಾಹಿನಿಗಳಲ್ಲಿ ಯುದ್ಧದ ಸನ್ನಿವೇಶಗಳು, ಸೈನಿಕರು ಪಡುತ್ತಿರುವ ಶ್ರಮ ಮತ್ತು ತ್ಯಾಗ ನೋಡಿದೆ. ಸೋಮವಾರ ಚನ್ನಮ್ಮನ ಕಿತ್ತೂರಿನ ಎಸ್ ಬಿಐ ಬ್ಯಾಂಕ್ ಶಾಖೆಗೆ ತಂದೆಯ ಜತೆ ತೆರಳಿ ಸೈನಿಕರ ನಿಧಿಗೆ ಹಣ ಜಮೆ ಮಾಡಿದೆವು’ ಎಂದು ಸಚಿನ್ ಯರಗುದ್ದಿ ‘ಪ್ರಜಾವಾಣಿ’ಗೆ ತಿಳಿಸಿದ.
‘ಜನ್ಮದಿನಾಚರಣೆಯಲ್ಲಿ ಕಾಣಿಕೆ ನೀಡಿದ ಮತ್ತು ಜಾತ್ರೆ ಸಂದರ್ಭದಲ್ಲಿ ಇಷ್ಟದ ವಸ್ತುಗಳನ್ನು ಖರೀದಿಸಲು ಪಾಲಕರು ಮತ್ತು ಸಂಬಂಧಿಕರು ನೀಡಿದ ಹಣವನ್ನು ಹುಂಡಿಯಲ್ಲಿ ಹಾಕಿ ಸಂಗ್ರಹಿಸಿದ್ದೆ. ಈಚೆಗೆ ತೆಗೆದು ಲೆಕ್ಕ ಹಾಕಿದೆ. ಅದು₹5,151 ಸಂಗ್ರಹವಾಗಿತ್ತು’ ಎಂದು ಆತ ಹೇಳಿದ.
‘ಮಗನ ಮಾತು ಕೇಳಿ ನಮಗೂ ಆಶ್ಚರ್ಯವಾಯಿತು. ಅವನಿಷ್ಟದಂತೆ ಬ್ಯಾಂಕ್‌ಗೆ ಹೋಗಿ ಸೋಮವಾರ ದುಡ್ಡು ಕಟ್ಟಿ ಬಂದೆವು’ ಎಂದು ತಂದೆ ಗಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.