ADVERTISEMENT

ಮುಗಳಖೋಡ: ಟ್ರ್ಯಾಕ್ಟರ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:01 IST
Last Updated 18 ಅಕ್ಟೋಬರ್ 2021, 14:01 IST
ಮುಗಳಖೋಡದಲ್ಲಿ ಪಿಕೆಪಿಎಸ್‌ ವತಿಯಿಂದ ಫಲಾನುಭವಿಗಳಿಗೆ ಟ್ರ್ಯಾಕ್ಟರ್‌ ವಿತರಣೆಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಹೇಬ ಕುಲಗೂಡೆ ಚಾಲನೆ ನೀಡಿದರು. ಅಧ್ಯಕ್ಷ ಭೀರಪ್ಪ ಶೇಗುಣಸಿ, ಉಪಾಧ್ಯಕ್ಷ ಲಕ್ಷ್ಮಣ ಗೋಕಾಕ ಮತ್ತು ನಿರ್ದೇಶಕರು ಇದ್ದಾರೆ
ಮುಗಳಖೋಡದಲ್ಲಿ ಪಿಕೆಪಿಎಸ್‌ ವತಿಯಿಂದ ಫಲಾನುಭವಿಗಳಿಗೆ ಟ್ರ್ಯಾಕ್ಟರ್‌ ವಿತರಣೆಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಹೇಬ ಕುಲಗೂಡೆ ಚಾಲನೆ ನೀಡಿದರು. ಅಧ್ಯಕ್ಷ ಭೀರಪ್ಪ ಶೇಗುಣಸಿ, ಉಪಾಧ್ಯಕ್ಷ ಲಕ್ಷ್ಮಣ ಗೋಕಾಕ ಮತ್ತು ನಿರ್ದೇಶಕರು ಇದ್ದಾರೆ   

ಮುಗಳಖೋಡ: ‘2020-21ನೇ ಸಾಲಿನಿಂದಲೂ ಕೋವಿಡ್‌ ಹಾವಳಿಯಿಂದ ರೈತರು ಕಂಗಾಲಾಗಿದ್ದರೂ ಶೇ 98ರಷ್ಟು ಸಾಲ ಮರುಪಾವತಿ ಮಾಡಿರುವುದು ಸಂತಸದ ವಿಷಯ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಹೇಬ ಕುಲಗೂಡೆ ಹೇಳಿದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ವತಿಯಿಂದ ಫಲಾನುಭವಿಗಳಿಗೆ ಟ್ರ್ಯಾಕ್ಟರ್‌ ಕೀಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

‘ಶೇ 3 ಬಡ್ಡಿ ದರದಲ್ಲಿ 11 ಟ್ರ್ಯಾಕ್ಟರ್‌ಗಳನ್ನು ವಿತರಿಸಲಾಗುತ್ತಿದೆ. ಸಕಾಲದಲ್ಲಿ ರೈತರು ಸಾಲದ ಕಂತು ಮರು ಪಾವತಿ ಮಾಡಿದ್ದರಿಂದ ಸಬ್ಸಿಡಿ ರೂಪದಲ್ಲಿ ₹ 10.04 ಕೋಟಿಯನ್ನು ಸಂಘ ಪಡೆದಿರುವುದು ವಿಶೇಷವಾಗಿದೆ. ಸಂಘದ ಅಭಿವೃದ್ಧಿಗೆ ಇದು ತುಂಬಾ ಸಹಕಾರಿಯಾಗುತ್ತದೆ’ ಎಂದರು.

ADVERTISEMENT

ಡಿಸಿಸಿ ಬ್ಯಾಕ್‌ ರಾಯಬಾಗ ತಾಲ್ಲೂಕು ನಿಯಂತ್ರಣಾಧಿಕಾರಿ ಬಿ.ಎಸ್‌. ರಬಗಲ್, ‘ದೀಪಾವಳಿ ಹಬ್ಬದ ಅಂಗವಾಗಿ ನಮ್ಮ ಪಿಕೆಪಿಎಸ್‌ ವತಿಯಿಂದ ವಾಹನ ಸಾಲ ವಿತರಣೆ ನೀಡಲಾಗುತ್ತಿದೆ. ರಿಯಾಯಿತಿ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಅಧ್ಯಕ್ಷ ಭೀರಪ್ಪ ಶೇಗುಣಸಿ, ಉಪಾಧ್ಯಕ್ಷ ಲಕ್ಷ್ಮಣ ಗೋಕಾಕ, ನಿರ್ದೇಶಕರಾದ ಲಕ್ಷ್ಮಣ ಮುನ್ಯಾಳ, ರಾಮಚಂದ್ರ ಕುರಾಡೆ, ಕೆರೆಪ್ಪ ಮಂಟೂರ, ಚನ್ನಪ್ಪ ಯಡವಣ್ಣವರ, ಗಣಪತಿ ಕುಡ್ಡನ್ನವರ, ಮಹಾದೇವ ಉಗಾರ, ರಮೇಶ ಗುರವ, ಗೋಪಾಲ ಗೋಕಾಕ, ಅಪ್ಪಸಾಬ ಬಾಬಣ್ಣವರ, ತುಕಾರಾಮ ಗುರುವ, ಜಯಪಾಲ ಹಿಪ್ಪರಗಿ ಇದ್ದರು.

ಗಣಪತಿ ಕುರಾಡೆ ಸ್ವಾಗತಿಸಿದರು. ಸತೀಶಿ ಬಂದಿ ನಿರೂಪಿಸಿದರು. ಎಲ್‌.ಬಿ. ಮುನ್ಯಾಳ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.